
ಬಾಗಲಕೋಟೆ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಇಂದು ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಕ ಕುರಿತು ಪೇಪರ್‌ನಲ್ಲಿ ನೋಡಿದ್ದೇನೆ. ಅದರ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡ್ತಿದ್ದು ಅವರಿಗೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಕುಮಾರಣ್ಣ, ಬಿಜೆಪಿಯವ್ರು ಸಹ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ. ಇದರಲ್ಲಿ ನಾವು ಭಾಗಿಯಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಡಿಸಿಎಂ ಡಿಕೆಶಿ ಸಿಡಿ ತಯಾರಿಸೋದರಲ್ಲಿ ನಿಸ್ಸೀಮರು ಎಂದು ಮಾಜಿ ಶಾಸಕ ರಾಜುಗೌಡ ಹೇಳಿದ್ದಾರೆ. ಬಹಳ ಸಂತೋಷ, ನನ್ನ ಆಗಾಗ ಬಿಜೆಪಿಯವ್ರು, ದಳದವ್ರು ನೆನಪಿಸಿಕೊಳ್ತಾರೆ. ಅವ್ರೆಲ್ಲ ನೆನಪಿಸಿಕೊಳ್ಳಲೇಬೇಕು. ಯಾಕೆಂದರೆ ನಾನು ಒಂದು ಪಕ್ಷದ ಅಧ್ಯಕ್ಷ, ಕ್ಯಾಪ್ಟನ್. ನನ್ನನ್ನು ನೆನಪಿಸಿಕೊಳ್ಳದೆ ಇನ್ಯಾರನ್ನು ನೆನಪಿಸಿಕೊಳ್ತಾರೆ ಎಂದು ಪ್ರಶ್ನಿಸಿದರು.ಇನ್ನು ರಾಜೂಗೌಡ ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯರ ಸಿಡಿಯನ್ನು ಡಿಕೆ ಶಿವಕುಮಾರ ಬಿಡುಗಡೆ ಮಾಡಿದರೆ ಅಚ್ಚರಿ ಪಡಬೇಕಿಲ್ಲ ಎಂಬ ಹೇಳಿಕೆ ನೀಡಿದ್ದು ಇದರಿಂದ ಗರಂ ಆದ ಡಿಸಿಎಂ, ಯಾರೋ ಅವನ್ಯಾವನ್ರೀ ರಾಜೂಗೌಡ ಅನ್ನೋನು ಮಾತಾಡಿದ್ದಾನಲ್ಲ, ಅವನು ಒಬ್ಬ ಮೆಂಟಲ್ ಕೇಸ್ ಅವನ ಮಾತುಗಳಿಗೆ ಮಹತ್ವ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.