
ಜೇಸಿಐ ಕಾರ್ಕಳ ವತಿಯಿಂದ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ Traffic Police Sign Board (Reflector) ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಪ್ರಸನ್ನ ಎಂ ಎಸ್ ಮಾತನಾಡಿ, ಈ ಕಾರ್ಯಕ್ರಮ ಉಡುಪಿ ಜಿಲ್ಲೆಯಲ್ಲಿ ಮೊದಲ ಕಾರ್ಯಕ್ರಮ ಹಾಗೂ ವಿನೂತನ ಕಾರ್ಯಕ್ರಮ , ರಾತ್ರಿ ಸಮಯದಲ್ಲಿ ನಿಜವಾದ ಪೊಲೀಸ್ ನಿಂತ ಹಾಗೆ ಕಾಣುವಂತ ರೂಪ. ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳಿವೆ . ವಾಹನ ಚಾಲಕರಿಗೆ ಜಾಗೃತಿ ಹಾಗೂ ಅರಿವು ಮೂಡಿಸುವಂತಹ ಇಲಾಖೆಯ ವಿಶೇಷ ಪ್ರಯತ್ನ, ಇಲಾಖೆ ಜೊತೆ ಸಹಕರಿಸಿದ ಜೇಸಿಐ ಸಂಸ್ಥೆಗೆ ಅಭಿನಂದನೆಗಳು ಎಂದು ಶುಭ ಹಾರೈಸಿದರು.
ಜೇಸಿಐ ಪೂರ್ವ ವಲಯ ಅಧಿಕಾರಿ ಪದ್ಮಪ್ರಸಾದ್ ಜೈನ್ ಅವರು ಮಾತನಾಡಿ, ಜೇಸಿಐ ಸಂಸ್ಥೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಹಲವಾರು ಕಾರ್ಯಕ್ರಮಗಳನ್ನು ಮಾಡಿ ಜನ ಮನ ಗೆದ್ದ ಸಂಸ್ಥೆ, 52 ವರ್ಷ ಇತಿಹಾಸ ಇರುವ ಪ್ರತಿಷ್ಠಿತ ಘಟಕ ಜೇಸಿಐ ಕಾರ್ಕಳ ಈ ವರ್ಷ ಉತ್ತಮವಾದ ಕಾರ್ಯಕ್ರಮಗಳನ್ನು ಮಾಡಿ ಸಾಧನೆಯನ್ನು ಮಾಡಿರುವುದು ಬಹಳ ಹೆಮ್ಮೆಯ ವಿಚಾರ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳದ ಅಧ್ಯಕ್ಷರಾದ ಶ್ವೇತಾ ಎಸ್ ಜೈನ್, ಪೂರ್ವ ಅಧ್ಯಕ್ಷರಾದ ಸಂತೋಷ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷರಾದ ಪ್ರಚಿತ್ ಕುಮಾರ್ ಕಾರ್ಯದರ್ಶಿ ಸುಶ್ಮಿತಾ, ರೇವತಿ ಶೆಟ್ಟಿ, ವೃಷಭ ರಾಜ್ ಜೈನ್, ಸಂದೀಪ್ ಜೈನ್, ಹಾಗೂ ಕಾರ್ಕಳ ಪೊಲೀಸ್ ಇಲಾಖಾ ಸಿಬ್ಬಂಧಿಗಳು ಉಪಸ್ಥಿತರಿದ್ದರು.






























































































































