ಜೇಸಿ ಸಮದ್ ಖಾನ್ ನೇತೃತ್ವದಲ್ಲಿ, ವಿಜೇತ ವಿಶೇಷ ಶಾಲೆ ಕಾರ್ಕಳದಲ್ಲಿ, ಕುಡಿಯುವ ಉಚಿತ ನೀರಿನ ಸರಬರಾಜು ಕಾರ್ಯಕ್ರಮ

ಜೆ.ಸಿ.ಐ ಅಲೂಮ್ನಿ ಕ್ಲಬ್ ಜೋನ್ 15, ಜೆ.ಸಿ.ಐ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ, ಜಲ್ವಾ-ಎ-ನೂರ್ ಎಜುಕೇಶನ್ ಟ್ರಸ್ಟ್ ಇವರ ಸಹಯೋಗದಲ್ಲಿ ಶ್ರೀ ಸಮದ್ ಖಾನ್ & ಶ್ರೀಮತಿ ಶಗುಪ್ತಾಖಾನ್ ದಂಪತಿಗಳ ಸುಪುತ್ರಿ ಕು.ಅಲ್ಷಾ ಖಾನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಕಳದ ವಿಜೇತ ವಿಶೇಷ ಶಾಲೆಯಲ್ಲಿ ಕುಡಿಯುವ ನೀರಿನ ಸರಬರಾಜು ಕಾರ್ಯಕ್ರಮದ ಚಾಲನೆಯನ್ನು ಎಸ್. ವಿಜಯ ಪ್ರಸಾದ್ ಕಾರ್ಕಳ ಉಪವಿಭಾಗ ಕೆ.ಎಸ್. ಪಿ.ಎಸ್ ಪೊಲೀಸ್ ಉಪಾಧೀಕ್ಷಕರು ನೆರವೇರಿಸಿ, ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೆಸಿಐ ಜೋನ್ 15 ಚೇರ್ ಮಾನ್ ಜೆ.ಸಿ ಅಬ್ದುಲ್ ಜಬ್ಬಾರ್, ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷರಾದ ರೊ.ನವೀನ್ ಶೆಟ್ಟಿ, ಜೆಸಿಐ ಕಾರ್ಕಳ ಅಧ್ಯಕ್ಷರಾದ ಜೆಸಿ.ಅವಿನಾಶ್ ಶೆಟ್ಟಿ, ಜಲ್ವಾ-ಎ-ನೂರ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ನಸೀರ್ ಶೇಕ್, ಜೆಸಿಐ ಅಲೂಮ್ನಿ ಜೋನ್ 15 ರ ಕಾರ್ಯದರ್ಶಿ ಜೆಸಿ. ಸಮದ್ ಖಾನ್ , ಜೆಸಿ. ಸುಶಾಂತ್ ಶೆಟ್ಟಿ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ರೋಟರಿ ಕ್ಲಬ್ ಸದಸ್ಯರು ಹಾಗೂ ಜೆಸಿಐನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ಕಾರ್ಯಕ್ರಮ ನಿರೂಪಿಸಿ, ಡಾ ಕಾಂತಿ ಹರೀಶ್ ಸ್ವಾಗತಿಸಿ, ಶ್ವೇತಾ ನಿತಿನ್ ವಂದಿಸಿದರು.





















