27.9 C
Udupi
Friday, July 10, 2026
spot_img
spot_img
HomeBlogಜು.12ರಂದು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ನಿಟ್ಟೆ ಮತ್ತು ಅದರ ಉಪ ಸಮಿತಿಯಿಂದ ‘ರಸ್ತೆ...

ಜು.12ರಂದು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ನಿಟ್ಟೆ ಮತ್ತು ಅದರ ಉಪ ಸಮಿತಿಯಿಂದ ‘ರಸ್ತೆ ಸುರಕ್ಷತಾ ಅಭಿಯಾನ’

ದೂಪದಕಟ್ಟೆ–ಹಾಳೆಕಟ್ಟೆ ಮಾರ್ಗದಲ್ಲಿ ಸ್ವಚ್ಛತೆ ಹಾಗೂ ಜಾಗೃತಿ ಕಾರ್ಯಕ್ರಮ

ಜುಲೈ 12 ಭಾನುವಾರದಂದು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ (ರಿ.) ನಿಟ್ಟೆ ಮತ್ತು ಅದರ ಉಪಸಮಿತಿಗಳ ಆಶ್ರಯದಲ್ಲಿ ದೂಪದಕಟ್ಟೆಯಿಂದ ಹಾಳೆಕಟ್ಟೆವರೆಗೆ ಸುಮಾರು 5 ಕಿ.ಮೀ.ವರೆಗೆ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ‘ರಸ್ತೆ ಸುರಕ್ಷತಾ ಅಭಿಯಾನ’ವನ್ನು ಬೆಳಿಗ್ಗೆ 7 ಗಂಟೆಯಿಂದ ಆಯೋಜಿಸಲಾಗಿದೆ.

ಈ ಅಭಿಯಾನದಲ್ಲಿ ರಸ್ತೆ ಬದಿಯ ಮಣ್ಣು ತೆರವುಗೊಳಿಸುವುದು, ರಸ್ತೆಗೆ ಅಡ್ಡಿಯಾಗಿರುವ ಗಿಡಗಂಟಿಗಳನ್ನು ಕತ್ತರಿಸಿ ಸ್ವಚ್ಛಗೊಳಿಸುವುದು, ರಸ್ತೆ ಸೂಚನಾ ಫಲಕಗಳನ್ನು ಸ್ವಚ್ಛಗೊಳಿಸುವುದು ಹಾಗೂ ಗಿಡಗಂಟಿಗಳಿಂದ ಮುಚ್ಚಿಹೋಗಿರುವ ಎಚ್ಚರಿಕೆ ಫಲಕಗಳನ್ನು ಗೋಚರಿಸುವಂತೆ ಮಾಡುವ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.

ಈ ಕಾರ್ಯಕ್ರಮದ ಮೂಲಕ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ವಾಹನ ಸವಾರರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುವುದು ಉದ್ದೇಶವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಪ್ರದೇಶದ ರಸ್ತೆ ಸುರಕ್ಷತೆಗೆ ಕೈಜೋಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page