
ತಮಿಳು ನಟಿ ಸ್ನೇಹಾ ಮತ್ತು ಪತಿ ಪ್ರಸನ್ನ ವಿಚ್ಚೇದನ ಪಡೆಯುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಈ ಕುರಿತು ನಟಿ ಸ್ನೇಹ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ಸ್ನೇಹ ‘ಜೀವನದಲ್ಲಿ ಪೊಸೆಸಿವ್‌ನೆಸ್ ಬೇರೆ ನಂಬಿಕೆ ಬೇರೆ. ಹೆಚ್ಚು ಪೊಸೆಸಿವ್ ಅಗಿಬಿಟ್ಟರೆ ನಂಬಿಕೆ ಬ್ಯಾಲೆನ್ಸ್ ಮಾಡುವುದು ಕಷ್ಟ. ಮತ್ತೊಬ್ಬರಿಗೆ ಈ ಪೊಸೆಸಿವ್‌ನೆಸ್ ಅರ್ಥವಾಗುವುದಿಲ್ಲ. ಎಲ್ಲಿ ಹೋಗುತ್ತೀರಾ ಏನು ಮಾಡುತ್ತಿದ್ದೀರಾ ಎಂದು ಪದೇ ಪದೇ ಪ್ರಶ್ನೆ ಮಾಡಿದರೆ ಅದು ಪೊಸೆಸಿವ್‌ನೆಸ್ ಒಂದೇ ಅಲ್ಲ ನಂಬಿಕೆ ಕೂಡ ಆಗಿರಬಹುದು. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಂಡೆ ಸಮಸ್ಯೆ ಆಗಲ್ಲ. ಇಲ್ಲವಾದರೆ ಏನ್ ಮಾಡಿದರೂ ತಪ್ಪಾಗುತ್ತದೆ. ಏನು ಮಾಡುತ್ತಿದ್ದೀನಿ ಎಲ್ಲಿ ಹೋಗುತ್ತಿದ್ದೀನಿ ಎಷ್ಟು ಹೊತ್ತಿಗೆ ಬರುತ್ತೇನೆ ಎಂದು ಒಬ್ಬರು ಕೇಳುವುದಕ್ಕೂ ಮುನ್ನವೇ ಇನ್ನೊಬ್ಬರು ಹೇಳಬೇಕು. ಅಥವಾ ಅಲ್ಲಿ ಹೋದ ಮೇಲೆ ಸಮಯ ಇದ್ದರೆ ಒಮ್ಮೆ ಫೋನ್ ಮಾಡಿ ಮಾತನಾಡಬೇಕು. ಏನು ಮಾಡುತ್ತಿದ್ದೀರಾ ಹೇಗಿದ್ದೀರಾ ಎಂದು ವಿಚಾರಿಸಿಕೊಳ್ಳಬೇಕು. ಇಂತಹ ವಿಷಯಗಳೇ ಇಬ್ಬರಲ್ಲಿ ನಂಬಿಕೆ ಹೆಚ್ಚಿಸುತ್ತದೆ. ಆರಂಭದಲ್ಲಿ ನಾನು ಸ್ವಲ್ಪ ಪೊಸೆಸಿವ್ ಅಗಿದ್ದೆ. ಹಾಗಂತ ನಂಬಿಕೆ ಇರಲಿಲ್ಲ ಅಂತಲ್ಲ. ಮದುವೆ ಆದಮೇಲೆ ಜೀವನ ನಮಗೂ ಬೋರ್ ಆಗುತ್ತದೆ. ನಾನು ಸಾಕಷ್ಟು ಸಲ ಜಗಳ ಮಾಡಿದ್ದೀನಿ..ಜಗಳದ ಬಳಿಕೆ ಇಬ್ಬರೂ ಡೇಟ್ ನೈಟ್ ಹೋಗಿ ಮಾತನಾಡಿಕೊಂಡು ಸರಿ ಮಾಡಿಕೊಳ್ಳುತ್ತೇನೆ. ಬಳಿಕ ಮತ್ತೆ ಜೀವನ ಮುಂದುವರೆಯುತ್ತದೆ’ ಎಂದು ಸ್ನೇಹಾ ಹೇಳಿಕೊಂಡಿದ್ದಾರೆ.