
ಜೇಸಿಐ ಕಾರ್ಕಳ ವತಿಯಿಂದ ಮಕ್ಕಳಿಗಾಗಿ “ಕಾನೂನು ಸಂರಕ್ಷಣೆ”ಮಾಹಿತಿ ಕಾರ್ಯಗಾರ ನಡೆದಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಹೆಚ್ಚುವರಿ ಪೋಲಿಸ್ ಅಧೀಕ್ಷಕರ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ್ ಹೆಡ್ ಕಾನ್ ಸ್ಟೇಬಲ್ ಆಗಿರುವ ಶ್ರೀಯುತ ಸಂತೋಷ್ ಕಾರ್ಕಳ, ಇವರು ಮಕ್ಕಳಿಗೆ ಕಾನೂನಿನ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು. ಪೊಲೀಸ್ ಠಾಣಿಯ ಕೆಲಸ ಕಾರ್ಯಗಳ ಬಗ್ಗೆ ತಿಳಿಯಲು ತೆರೆದ ಮನೆ (ಪೊಲೀಸ್ ಠಾಣೆ)ಗೆ ಬರುವಂತೆ ತಿಳಿಸಿದರು. ಹೆಚ್ಚುತ್ತಿರುವ ಪೋಕ್ಸೋ. ಮಾದಕ ವ್ಯಸನ. ಸೈಬರ್ ಅಪರಾಧ. ಸಂಚಾರ ಸುರಕ್ಷತೆ ಬಗ್ಗೆ. 112 ತುರ್ತು ಕರೆ. 1930 ಸೈಬರ್ ಕರೆಯ ಇಲ್ಲಿ ಯಾವುದು ಹೆದರಿಕೆ, ಅಳುಕು ಇಲ್ಲದೇ ಎಲ್ಲರೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪೊಲೀಸ್ ಇಲಾಖೆ ಮಕ್ಕಳ ಸ್ನೇಹಿ ಆಗಿದ್ದು ಯಾವಾಗಲೂ ಮಕ್ಕಳ ಹಾಗೂ ಸಮಾಜದ ಸಹಾಯಕ್ಕೆ ಸಿದ್ಧರಿದ್ದಾರೆ ಎ೦ದು ತಿಳಿಸಿದರು.
ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ನಡೆದು ಉತ್ತಮ ಪ್ರಜೆಯಾಗಿ ದೇಶಕ್ಕೆ ಮಾದರಿಯಾಗಬೇಕೆಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಎಸ್ ಜೈನ್. ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸಂಯುಕ್ತ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀ ದಿವಾಕರ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ಶ್ರೀ ದಿವಾಕರ ರವರು ಸ್ವಾಗತಿಸಿ,ಜೇಸಿಐ ಕಾರ್ಕಳದ ಅಧ್ಯಕ್ಷರಾದ ಜೇಸಿ ಶ್ವೇತಾ ಎಸ್ ಜೈನ್ ರವರು ವಂದಿಸಿದರು.






















