28.3 C
Udupi
Wednesday, April 22, 2026
spot_img
spot_img
HomeBlogಕ್ರೈಸ್ಟ್ ಕಿಂಗ್: ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಐತಿಹಾಸಿಕ ಸಾಧನೆ

ಕ್ರೈಸ್ಟ್ ಕಿಂಗ್: ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಐತಿಹಾಸಿಕ ಸಾಧನೆ

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ನಾಲ್ಕೂ ತಂಡಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ


ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ, ಬಾಲಕಿಯರ ಸರಕಾರಿ ಪ್ರೌಢಶಾಲೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರ ನಾಲ್ಕೂ ತಂಡಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಸಂಸ್ಥೆಯು ಐತಿಹಾಸಿಕ ಸಾಧನೆ ಮೆರೆದಿದೆ.

ಈ ಮೂಲಕ ಈ ವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೇ ಮೈಸೂರು ವಿಭಾಗಮಟ್ಟದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಪ್ರಾಥಮಿಕ ವಿಭಾಗದ ಬಾಲಕರ ತಂಡವನ್ನು ಏಳನೇ ತರಗತಿಯ ಅಶ್ವಿನ್ ಶೆಟ್ಟಿ, ಪ್ರೆಸ್ಟನ್ ಡಿ’ಸೋಜ, ಆರನೇ ತರಗತಿಯ ವಿಹಾನ್ ಪೂಜಾರಿ, ರಿಸ್ಟನ್ ಸೆರಾವೋ ಪ್ರತಿನಿಧಿಸಿದರೆ ಬಾಲಕಿಯರ ತಂಡವನ್ನು ಏಳನೇ ತರಗತಿಯ ಖುಷಿ ಆರ್.ಶೆಟ್ಟಿ, ವಿಶ್ಮಿತಾ, ಆರನೇ ತರಗತಿಯ ಮೆಲ್ರಿನ್ ಫೆರ್ನಾಂಡಿಸ್ ಪ್ರತಿನಿಧಿಸಿದ್ದರು.ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡವನ್ನು ಒಂಬತ್ತನೇ ತರಗತಿಯ ಲೆನಿಶಾ ಡಿ’ಸೋಜ, ವಿಯೋನಾ ಪ್ರೇರಿತಾ ಸೆರಾವೊ, ಹತ್ತನೇ ತರಗತಿಯ ಗಣ್ಯ ಪೂಜಾರಿ, ಅನಘ ರಾವ್ ಪ್ರತಿನಿಧಿಸಿದರೆ ಬಾಲಕರ ತಂಡವನ್ನು ಒಂಬತ್ತನೇ ತರಗತಿಯ ಗೌರವ್ ದೇವಾಡಿಗ, ಶೋಬಿತ್ ಕೆ.ಹೆಚ್, ಮೊಹಮ್ಮದ್ ಅಯಾನ್, ಪ್ರಥಮ್ ಶೆಟ್ಟಿ, ಹತ್ತನೇ ತರಗತಿಯ ಸಾವನ್ ಎಸ್ ವರ್ಮ ಪ್ರತಿನಿಧಿಸಿದ್ದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್, ಪ್ರಕಾಶ್ ನಾಯ್ಕ್, ಕು.ಲಾವಣ್ಯ ತಂಡದ ನೇತೃತ್ವ ವಹಿಸಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page