
ಕ್ರೀಡಾ ಭಾರತಿ ಕಾರ್ಕಳ ನಿರಂತರ ಯೋಗ ಕೇಂದ್ರ ಕಾರ್ಕಳ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿಜಿಸ್ಟರ್ಡ್ ಕರ್ನಾಟಕ ಇದರ ಕಾರ್ಕಳ ಘಟಕ ಇವರ ಸಹಯೋಗದಲ್ಲಿ ಕಾರ್ಕಳ ಶ್ರೀಮದ್ಭುವನೇಂದ್ರ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 6 ರಿಂದ 7 ರವರೆಗೆ ಹತ್ತನೇ ವರ್ಷದ ವಿಶ್ವ ಯೋಗ ದಿನಾಚರಣೆಯು “ಸ್ವಹಿತ ಮತ್ತು ಸಮಾಜಕ್ಕಾಗಿ ಯೋಗ” ಎನ್ನುವ ಘೋಷ ವಾಕ್ಯದೊಂದಿಗೆ ಅತ್ಯಂತ ಯಶಸ್ವಿಯಾಗಿ ಜರುಗಿತು.
ನಿರಂತರ ಯೋಗ ಕೇಂದ್ರದ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ನಿತ್ಯಾನಂದ ಪೈ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಕಳ ಘಟಕದ ನಗರ ಸಂಚಾಲಕರಾದ ಶ್ರೀ ಸಂತೋಷ್ ಕುಮಾರ್ ಹಾಗೂ ಹಿರಿಯ ಯೋಗ ಪಟು ಶ್ರೀ ವಿನಾಯಕ ಕುಡ್ವ ಹಾಗೂ ಕ್ರೀಡಾ ಭಾರತೀಯ ವಿಭಾಗ ಸಂಯೋಜಕರಾದ ಶ್ರೀ ಪ್ರಸನ್ನ ಶೆಣೈ ಉಪಸ್ಥಿತರಿದ್ದರು. ಯೋಗ ಶಿಕ್ಷಕಿಯರಾಗಿ ಶ್ರೀಮತಿ ರವಿಕಲಾ ಹೆಗ್ಡೆ,ಶ್ರೀಮತಿ ನಯನ ಪ್ರಭು ಹಾಗೂ ಶ್ರೀಮತಿ ಶ್ವೇತಾ ಶೆಣೈ ಯೋಗಾಸನವನ್ನು ಮಾಡಿಸಿದರು. ಕ್ರೀಡಾ ಭಾರತೀಯ ಕಾರ್ಕಳ ತಾಲೂಕಿನ ಕಾರ್ಯದರ್ಶಿಯಾದ ಶ್ರೀ ಸಂಜಯ್ ಕುಮಾರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಾರ್ವಜನಿಕರೂ ಕೂಡ ಭಾಗವಹಿಸಿದ್ದರು.ಕ್ರೀಡಾ ಭಾರತಿ ಕಾರ್ಕಳ ತಾಲೂಕು ಅಧ್ಯಕ್ಷರಾದ ಶ್ರೀ ಸಿ. ಶಿವಾನಂದ ಕಾಮತ್ ವಂದಿಸಿದರು.


