ಹಿಂದುಳಿದ ವರ್ಗದ ಸಂಪೂರ್ಣ ನಿರ್ಲಕ್ಷ ಬಜೆಟ್ಟಿನ ಮಹಾಸಾಧನೆ: ಬಿಪಿನಚಂದ್ರ ಪಾಲ್ ನಕ್ರೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 50 ಲಕ್ಷದ 65 ಸಾವಿರದ 345 ಕೋಟಿ ರೂ. ಯೋಜನೆಯ 2025-26 ರ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆ ಗಳನ್ನು ನೀಡದೆ ಕರ್ನಾಟಕವನ್ನು ಅವಗಣಿಸಿದ್ದಷ್ಟೇ ಅಲ್ಲ ಕರಾವಳಿ ಕರ್ನಾಟಕಕ್ಕೆ ದ್ರೋಹ ಬಗೆಯಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಕರಾವಳೀ ಕರ್ನಾಟಕದ ಮೀನುಗಾರರು, ಬಂದರು ಕೈಗಾರಿಕೆ, ರೈತರು ಹಾಗೂ ಕೃಷಿಗೆ ಸಂಬಂದ ಪಟ್ಟಂತೆ ರಾಜ್ಯ ಸರಕಾರದ ಆಧ್ಯತಾ ವಲಯದ ಬೇಡಿಕೆಗಳ ಹೊರತಾಗಿಯೂ ಬಜೆಟ್ ನಲ್ಲಿ ಯಾವುದೇ ಯೋಜನೆಗಳ ಪ್ರಸ್ತಾವನೆ ಇಲ್ಲದಿರುವುದು ವಿಷಾದನೀಯ.
ರೈತರ ಉತ್ಪಾದನೆಗೆ ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿ, ಸಾಲಮನ್ನಾ ಬಗ್ಗೆ ಬಜೆಟ್ ಮೌನ ವಹಿಸಿದೆ. ರಾಜ್ಯ ಸರಕಾರ ಈಗಾಗಲೇ ಕೇಂದ್ರದ ಮುಂದಿಟ್ಟ ನೀರಾವರಿ ಯೋಜನೆಗಳನ್ನು ಬಜೆಟಿನಲ್ಲಿ ಅವಗಣಿಸಲಾಗಿರುವುದು ಇಲ್ಲಿನ ಅವರದ್ದೇ ಪಕ್ಷದ ಸಂಸದರ ವೈಪಲ್ಯವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಮಹಿಳಾ ಸಬಲೀಕರಣದ ಬಗ್ಗೆ ಯಾವುದೇ ನಿಗದಿತ ಸಮರ್ಪಕ ಯೋಜನೆಗಳಿಲ್ಲ. ಮೇಲ್ವರ್ಗದ ಉಧ್ಯಮಪತಿಗಳ ಓಲೈಸಿರುವ ಬಜೆಟ್ ಮಧ್ಯಮ ವರ್ಗದ ಆಧಾಯ ಮೂಲವನ್ನು ಹಚ್ಚಿಸುವ ನಿಟ್ಟಿನಲ್ಲಿ ಯಾವುದೆ ಕ್ರಮ ಕೈಗೊಂಡಿಲ್ಲ. ಮಹಿಳಾ ಸಬಲೀಕರಣದ ಬಗ್ಗೆ ಯಾವುದೆ ನಿಗದಿತ ಕಾರ್ಯಯೋಜನೆಗಳ ಪ್ರಸ್ತಾವನೆ ಇಲ್ಲ. ಪರಿಶಿಷ್ಟ ಜಾತಿ, ಪಂಗಡ ಹಿಂದುಳಿದ ವರ್ಗದ ಸಂಪೂರ್ಣ ನಿರ್ಲಕ್ಷವಷ್ಟೇ ಈ ಬಜೆಟ್ಟಿನ ಮಹಾ ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.





















