
ಕಾರ್ಕಳ :. ಇಕೋ ಕ್ಷಬ್ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹಕ್ಕು , ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಕರ್ತವ್ಯದ ಬಗ್ಗೆ ಹೊಸ್ಮಾರ್ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಕೃಷ್ಣ ಕುಮಾರ್ ಇವರು ಕೆ.ಎಂ.ಇ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯಂದು ‘ಇಕೋ ಕ್ಲಬ್’ ಅನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಪಾಟ್ಕರ್ , ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೊಲಿಟಾ ಡಿಸಿಲ್ವಾ
ಉಪಸ್ಥಿತರಿದ್ದರು.ಶಾಲಾ ವಿದ್ಯಾರ್ಥಿಗಳಾದ ದಿಗಂತ್ ನಿರೂಪಿಸಿ, ಪ್ರಿನ್ಸ್ಟನ್ ಸಿಕ್ವೇರ ಸ್ವಾಗತಿಸಿ, ಕುಮಾರಿ ಅಝ್ಮಿಯಾ ವಂದಿಸಿದರು.