
ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು ಇದರ ಕುಡಿಯುವ ನೀರಿನ ಬಾವಿಯಲ್ಲಿ ಕಸ ಕಡ್ಡಿಗಳು ಸೇರಿದಂತೆ ತ್ಯಾಜ್ಯ ವಸ್ತುಗಳು ತುಂಬಿ ಬಾವಿಯ ನೀರು ಮಲಿನವಾಗಿತ್ತು. ಈ ಬಾವಿಯನ್ನು ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು ಮುಂಬೈ ಸಂಘದ ಸದಸ್ಯರು ಇಂದು ದಿನಾಂಕ 10-05-2026 ರಂದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಬಳಿಕ ಬಾವಿಯ ಕಂಪೌಂಡಿಗೆ ಬಣ್ಣ ಬಳಿಯಲಾಯಿತು. ಏಪ್ರಿಲ್ ತಿಂಗಳಿಂದ ಶಾಲೆಗೆ ರಜೆ ಇದ್ದು, ಬೇಸಿಗೆಯ ಈ ಸಂದರ್ಭದಲ್ಲಿ ಬಾವಿಯ ನೀರು ಬತ್ತುವುದರಿಂದ ನೀರು ಮಲಿನ ಗೊಂಡಿರುತ್ತದೆ. ಇದನ್ನು ಗಮನಿಸಿದ ಸಂಘದ ಸದಸ್ಯರು ಸಂಘದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ಪ್ರಭು, ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಶೆಟ್ಟಿ ಇವರ ಮಾರ್ಗದರ್ಶನದಂತೆ ಸಂಘದ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡು ಬಾವಿಯನ್ನು ಸ್ವಚ್ಛಗೊಳಿಸಿದರು. ಬಳಿಕ ಬಾವಿಯ ನೀರನ್ನು ಸಂಪೂರ್ಣವಾಗಿ ಬತ್ತಿಸಿ ಮಲಿನಗೊಂಡ ನೀರನ್ನು ಖಾಲಿ ಮಾಡಲಾಯಿತು.





















