32 C
Udupi
Sunday, May 10, 2026
spot_img
spot_img
HomeBlogಸ್ವಚ್ಛ ಕಾರ್ಕಳ ಬ್ರಿಗೇಡ್ ಅಭಿಯಾನ,… ಕಾರ್ಕಳ ಜೈನ್ ಬ್ರಿಗೇಡ್ ಜಂಟಿಯಾಗಿ

ಸ್ವಚ್ಛ ಕಾರ್ಕಳ ಬ್ರಿಗೇಡ್ ಅಭಿಯಾನ,… ಕಾರ್ಕಳ ಜೈನ್ ಬ್ರಿಗೇಡ್ ಜಂಟಿಯಾಗಿ

“ಜೀವಜಲ ಅಭಿಯಾನ” ಶೈಕ್ಷಣಿಕ ಸಾಧಕರಿಗೆ ಸನ್ಮಾನ

ಮಳೆಗಾಲದ ಮುನ್ನ ನೀರು ಹರಿಯುವ ಮೋರಿಗಳು ಹಾಗೂ ಒಳಚರಂಡಿಗಳಲ್ಲಿ ಸೇರುವ ಕಸವನ್ನು ತೆರವುಗೊಳಿಸುವ ಸ್ವಚ್ಛತಾ ಅಭಿಯಾನ ಕಾರ್ಕಳ ಜೈನ್ ಬ್ರಿಗೇಡ್ ನವರೊಂದಿಗೆ ಜಂಟಿಯಾಗಿ ಇಂದು ಬೆಳಿಗ್ಗೆ 6.30 ರಿಂದ 8.30 ರವರೆಗೆ ದಾನಶಾಲೆ ರಸ್ತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಳೆದ ವಾರ ಆರಂಭಿಸಿದ “ಜೀವಜಲ ಅಭಿಯಾನ” ಮುಂದುವರಿದಿದ್ದು, ಇಂದು ಮೂರು ಕಡೆಗಳಲ್ಲಿ ಪ್ರಾಣಿ–ಪಕ್ಷಿಗಳ ದಾಹ ನೀಗಿಸಲು ಮಣ್ಣಿನ ನೀರಿನ ಪಾತ್ರೆಗಳನ್ನು ಅಳವಡಿಸಲಾಯಿತು.

ಈ ಕಾರ್ಯದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಅನೇಕ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಪರಿಸರ ಸಂರಕ್ಷಣೆಗೆ ಕೈಜೋಡಿಸಿದರು.

ಅಭಿಯಾನದ ಬಳಿಕ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಬ್ರಿಗೇಡ್ ಸದಸ್ಯ ಮಕ್ಕಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಅಲಸಂದೆ ಹಾಗೂ ಬೆಂಡೆ ಬೀಜಗಳನ್ನು ನೀಡಿ ಮನೆಯಲ್ಲೇ ತರಕಾರಿ ಬೆಳೆಸಲು ಉತ್ತೇಜಿಸಲಾಯಿತು.

ಹೂ ಕುಂಡಗಳು ಹಾಗೂ ಹೂವಿನ ಬೀಜಗಳ ಮೂಲಕ ಹಸಿರು ಅಭ್ಯಾಸಗಳಿಗೆ ಪ್ರೇರಣೆ ಮತ್ತು ಪ್ರಾಣಿ ಪಕ್ಷಿಗಳಿಗಳ ದಾಹ ತೀರಿಸಲು ಮಣ್ಣಿನ ನೀರಿನ ಪಾತ್ರೆಗಳನ್ನು ನೀಡಿ ಮೂಕ ಪ್ರಾಣಿಗಳಿಗೆ ಸಹಾಯ ಮಾಡಿ ಸಮಾಜಕ್ಕೆ ಮಾದರಿಯಾಗುವಂತೆ ಪ್ರೇರೇಪಿಸಲಾಯಿತು.

ಮನೆಯಲ್ಲೇ ಬೆಳೆದ ಮಾವಿನ ಹಣ್ಣುಗಳನ್ನು ನೀಡಿ ಮಕ್ಕಳನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

“ಸ್ವಚ್ಛತೆ ನಮ್ಮ ಜವಾಬ್ದಾರಿ – ಮಕ್ಕಳ ಸಾಧನೆ ನಮ್ಮ ಹೆಮ್ಮೆ”

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page