
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 26/01/2024ರಂದು ಗಣರಾಜ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಶಾಲಾ ಅಧ್ಯಕ್ಷರಾದ ಡಾ.ಪ್ರಶಾಂತ್ ಹೆಗ್ಡೆ ಯವರು ಆಗಮಿಸಿ, ಧ್ವಜಾರೋಹಣ
ಕಾರ್ಯಕ್ರಮವನ್ನು ನಡೆಸಿಕೊಟ್ಟರು.
7ನೇ ತರಗತಿ ವಿದ್ಯಾರ್ಥಿಗಳಾದ ಈಶಾನ್ ಹೆಗ್ಡೆ ಹಾಗು ಸಾತ್ವಿಕ್ ಎಂ.ಗಣರಾಜ್ಯ ದಿನಾಚರಣೆ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಶಾಲಾ ನಾಯಕಿ ಅದಿತಿ ಡಿ .ಆಚಾರ್ಯ ನಿರೂಪಿಸಿ, ಶ್ರೇಯಾಂಶ್ ಹೆಗ್ಡೆ ಸ್ವಾಗತಿಸಿ, ಜಿಯಾ ಶೆಟ್ಟಿ ವಂದಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲ್ ಆರ್.ಕಾಮತ್, ಶಿಕ್ಷಕವೃಂದ-ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.





















