
ಕಾರ್ಕಳ, ಮಾ.21: ಹೆಬ್ರಿಿ, ಕಾರ್ಕಳ ತಾಲೂಕಿನಾದ್ಯಂತ ಮೊದಲ ದಿನದ ಎಸೆಸೆಲ್ಸಿಿ ಪರೀಕ್ಷೆೆ ಸುಸೂತ್ರವಾಗಿ ನಡೆಯಿತು. ತಾಲೂಕಿನ ವಿವಿಧ ಕೇಂದ್ರಗಳಲ್ಲಿ ಮಕ್ಕಳು ಪರೀಕ್ಷೆೆ ಬರೆದರು. ಬಹುತೇಕ ಮಕ್ಕಳು ಪರೀಕ್ಷೆೆ ಪ್ರಶ್ನೆೆ ಪತ್ರಿಿಕೆ ಬಗ್ಗೆೆ ಅಭಿಪ್ರಾಾಯ ವ್ಯಕ್ತಪಡಿಸಿ ಉತ್ತಮ ಅಂಕ ಪಡೆಯುವ ಬಗ್ಗೆೆ ವಿಶ್ವಾಾಸ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿಯರು ಸಹಿತ ಬಾಲಕರು ಸೇರಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಂಚಾರಕ್ಕೆೆ ವ್ಯವಸ್ಥೆೆ ಮಾಡಲಾಗಿತ್ತು. ಕೆಲವು ಶಾಲೆಗಳಲ್ಲಿ ಪರೀಕ್ಷೆೆ ಅನಂತರ ಊಟದ ವ್ಯವಸ್ಥೆೆ ಮಾಡಲಾಗಿತ್ತು.
2737 ನೋಂದಣಿಯಲ್ಲಿ 2719 ಮಂದಿ ಹಾಜರಾಗಿದ್ದು, 18 ಮಂದಿ ಗೈರಾಗಿದ್ದಾರೆ. ಇದರಲ್ಲಿ ರೆಗ್ಯೂಲರ್ ಮತ್ತು ರಿಪೀಟರ್ಸ್ ಇದ್ದಾರೆ. ತಾಲೂಕಿನ ಎಲ್ಲೆೆಡೆ ಪರೀಕ್ಷೆೆ ಸುಸೂತ್ರವಾಗಿ ನಡೆದಿದೆ ಎಂದು ಕಾರ್ಕಳ ಬಿಇಒ ತಿಳಿಸಿದ್ದಾರೆ.