
ಕಾರ್ಕಳ ಪುರಸಭೆ ವ್ಯಾಪ್ತಿಯ ಆನೆಕೆರೆ ಜಂಕ್ಷನ್ ಬಳಿ ಮಂಗಳೂರು,ಮೂಡುಬಿದ್ರಿ, ಬೆಳ್ಮಣ್,ಬಜಗೋಳಿ ,ಪಡುಬಿದ್ರಿ ,ಶೃಂಗೇರಿ, ಕಡೆಯಿಂದ ಬರುವ ಬಸ್ಸುಗಳು ಪ್ರಯಾಣಿಕರಿಗೆ ಇಳಿಸಲು ಇಲ್ಲಿ ನಿಲ್ಲಿಸುದರಿಂದ,ರಿಕ್ಷಾ ತಂಗುದಾಣ, ಎಸ್.ಎನ್.ವಿ ಪ್ರೌಢಶಾಲೆ ಹಾಗೂ ಎಸ್.ಎನ್.ವಿ ಕಾಲೇಜಿಗಳಿಗೆ ತೆರಳುವ ಮಕ್ಕಳನ್ನು ಮಧ್ಯ ರಸ್ತೆಯಲ್ಲಿ ಇಳಿಸುವುದನ್ನು ಕಂಡು ಕಾರ್ಕಳ ವಕೀಲರ ಗುಮಾಸ್ತರ ಸಂಘದ ವತಿಯಿಂದ ಫುಟ್ಪಾತ್ ಮೇಲಿನ ಗಿಡ ಗಂಟಿಗಳನ್ನು ತೆರವು ಮಾಡಿ ಹಾಸುಕಲ್ಲು ಹಾಸಿ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.ಈ ಸಂದರ್ಭದಲ್ಲಿ ಗುಮಾಸ್ತರ ಸಂಘದ ಸದಸ್ಯರಾದ ಪ್ರಕಾಶ್ ರಾವ್, ಪದ್ಮಾಕರ್ ದೇವಾಡಿಗ,ಸದಾನಂದ ಶೆಟ್ಟಿಗಾರ್,ಸುಕೇಶ್ ಕುಲಾಲ್,ಶಂಕರ ಗೌಡ ಉಪಸ್ಥಿತರಿದ್ದರು.