
ಬಂಟರ ಯಾನೆ ನಾಡವರ ಮಾತೃ ಸಂಘ ರಿ. ಮಂಗಳೂರು ಕಾರ್ಕಳ ಹೆಬ್ರಿ ತಾಲೂಕು ಸಮಿತಿ, ಮಹಿಳಾ ಬಂಟರ ಸಂಘ ಕಾರ್ಕಳ ಹಾಗೂ ಯುವ ಬಂಟರ ಸಂಘ ಸಹಯೋಗದಲ್ಲಿ ನಾಳೆ ನಡೆಯಲಿರುವ ಆಟಿಡೊಂಜಿ ಬಂಟ ಕೂಟ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ಕಾರ್ಯಕ್ರಮದ ಟ್ರೋಫಿ ಬಿಡುಗಡೆ ಕಾರ್ಯಕ್ರಮವು ಇಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಟ್ರೋಫಿ ಬಿಡುಗಡೆ ನ್ಯಾಯವಾದಿ ಸುನಿಲ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ, ಬಂಟರ ಸಂಘದ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿತು.













