
ಜೇಸಿಸ್ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಾರ್ಕಳ ಮತ್ತು ಜೆಸಿಐ ಕಾರ್ಕಳ ಇವರ ಸಹಯೋಗದಲ್ಲಿ ಜನವರಿ 22 ನೇ ತಾರೀಕು ಬುಧವಾರ ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಅಯೋಧ್ಯಾ ಪ್ರತಿಷ್ಠಾಪನೆಯ ಒಂದು ವರ್ಷದ ನೆನಪಿನ ಅಂಗವಾಗಿ ರಾಮ ತಾರಕ ಜಪ ಯಜ್ಞ ನಡೆಯಲಿದೆ.
ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಧಾರ್ಮಿಕ ಉಪನ್ಯಾಸ ಬೆಳಗ್ಗೆ 9.30 ರಿಂದ 10 ಗಂಟೆಯ ವರೆಗೆ ನಡೆಯಲಿದೆ. ಅಶೋಕ್ ಕಾರಂತ ಇವರ ಪೌರೋಹಿತ್ಯದಲ್ಲಿ ಹಾಗೂ ಕಾರ್ಕಳದ ಬೇರೆ ಬೇರೆ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ಕಾರ್ಯಕ್ರಮಗಳು ನೆರವೇರಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ, ಶ್ರೀ ರಾಮ ದೇವರ ಕೃಪೆಗೆ ಪಾತ್ರರಾಗಬೇಕಾಗಿ, ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ವಿನಂತಿ ಮಾಡಿದ್ದಾರೆ.





















