ಕಾರ್ಕಳದಿಂದ ಆಯ್ಕೆಯಾದ ಪ್ರಥಮ ಕ್ರೀಡಾಪಟು

ಕಾರ್ಕಳ ಆರ್ ಪಿ ಸಿ ಎಕ್ರಿಕೆಟ್ ತರಭೇತಿ ತಂಡದಿಂದ ಮನನ್ ವಿ ಜೈನ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು ವಿಭಾಗಕ್ಕೆ 16 ವಯೋಮಿತಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ .
ಕಾರ್ಕಳ ಕೆ ಎಸ್ ಸಿ ಎ ತಂಡದಿಂದ ಅಥವಾ ಕಾರ್ಕಳದಿಂದ ಆಯ್ಕೆಯಾದ ಮೊದಲ ಗ್ರಾಮೀಣ ಪ್ರತಿಭೆ ಕ್ರೀಡಾಪಟುವಾಗಿದ್ದು,ನಾಲೂರು ವಿದ್ಯಾನಂದ ಜೈನ್ ಮತ್ತು ಶಕುಂತಲಾ ಜೈನ್ ರವರ ಪುತ್ರ ಹಾಗೂ ಪ್ರಸ್ತುತ ಕ್ರೈಸ್ಟ್ ಕಿಂಗ್ ಶಾಲೆಯ ವಿದ್ಯಾರ್ಥಿ.ಅಂತರ್ ವಲಯ ಟೂರ್ನಮೆಂಟ್ ಬೆಂಗಳೂರಿನಲ್ಲಿ ಜರುಗಲಿದ್ದು ಮಂಗಳೂರು ವಲಯದ ಪರ ಭಾಗವಹಿಸಲಿದ್ದಾರೆ,ಪ್ರಸ್ತುತ ಆರ್ ಪಿ ಸಿ ಎ ಅಕಾಡೆಮಿಯ ತರಭೇತುದಾರ ರಾಘವೇಂದ್ರ ಪ್ರಭು ರವರ ಬಳಿ ಕೋಚಿಂಗ್ ಪಡೆಯುತ್ತಿದ್ದಾರೆ
ಇವರಿಗೆ ಭುವನೇಂದ್ರ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಮಂಜುನಾಥ ಕೋಟ್ಯಾನ್ ಹಾಗೂ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಶುಭ ಹಾರೈಸಿದ್ದಾರೆ




















































