
ಕಾರ್ಕಳ : ಮಾರಿ ಪೂಜೆಯ ಪ್ರಯುಕ್ತ ಮೂರು ಮಾರ್ಗ ಫ್ರೆಂಡ್ಸ್ ವತಿಯಿಂದ ವಾದ್ಯಗೋಷ್ಠಿ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.

ಸುಮಾರು 15 ವರ್ಷಗಳಿಂದ ಮೂರು ಮಾರ್ಗ ಮಾರ್ಕೆಟ್ ರಸ್ತೆಯಲ್ಲಿ ಮಾರಿಯಮ್ಮನ ಭಕ್ತಾದಿಗಳಿಗೆ ತಂಪು ಪಾನೀಯದ ವ್ಯವಸ್ಥೆ ಮಾಡಲು ಸಹಕರಿಸಿದ ಸೀತಾರಾಮ್, ಫ್ರಾನ್ಸಿಸ್, ಇಕ್ಬಾಲ್ ಅವರನ್ನು ಸಭಾಂಗಣದಲ್ಲಿ ಗೌರವಿಸಲಾಯಿತು.ಈ ಸಭಾ ಕಾರ್ಯಕ್ರಮದಲ್ಲಿ ಮಜಾ ಭಾರತ ಖ್ಯಾತಿಯ ಮೋಹನ್ ಕಾರ್ಕಳ, ಪ್ರಕಾಶ್ ದೇವಾಡಿಗ, ರಾಘವೇಂದ್ರ, ಮಧುರಾಜ್ ಶೆಟ್ಟಿ, ವಿಶ್ವನಾಥ್ ಸಾಲಿಯಾನ್, ಸಂತೋಷ್ ದೇವಾಡಿಗ ಮತ್ತು ಸಂಘದ ಸಂಘಟಕರಾದ ಕರಾವಳಿ ಪ್ರಶಾಂತ್ ಶೆಟ್ಟಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನು ಪ್ರಶಾಂತ್ ಪರವಾಡಿ ಅವರು ನಿರೂಪಿಸಿದರು.