27.4 C
Udupi
Friday, April 24, 2026
spot_img
spot_img
HomeBlogಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯ ಸರಕಾರ ಜನಪರ ವರದಿ ಸಲ್ಲಿಸಬೇಕು, ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ:...

ಕಸ್ತೂರಿ ರಂಗನ್ ವರದಿಯ ಬಗ್ಗೆ ರಾಜ್ಯ ಸರಕಾರ ಜನಪರ ವರದಿ ಸಲ್ಲಿಸಬೇಕು, ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ: ಸತೀಶ್ ಶೆಟ್ಟಿ, ಮುಟ್ಲು ಪಾಡಿ


ಕಾರ್ಕಳ: ಸೆ 24:ಕಸ್ತೂರಿನ ವರದಿ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು ಕೇಂದ್ರ ಸರಕಾರವು ಈ ವರದಿಗೆ ಒಳಪಟ್ಟ ರಾಜ್ಯಗಳಿಂದ ವರದಿ ಕೇಳಿದ್ದು ನಮ್ಮ ರಾಜ್ಯಸರ್ಕಾರ ವರದಿ ನೀಡುವ ಸಂದರ್ಭ ವರದಿ ಬಗ್ಗೆ ವಿರುದ್ಧವಾಗಿ ವರದಿ ಸಲ್ಲಿಸಬೇಕು. ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಈ ವರದಿ ಜಾರಿಗೆ ಅವಕಾಶ ಇರುವುದಿಲ್ಲ. ರಾಜ್ಯ ಸರ್ಕಾರ ಇದಕ್ಕೆ ಅವಕಾಶ ನೀಡಬಾರದು, ರಾಜ್ಯ ಸರ್ಕಾರವು ಜನವಿರೋಧಿ ವರದಿಯನ್ನು ಸಲ್ಲಿಸಿದ್ದಲ್ಲಿ ಈ ಭಾಗದ ಜನರು ಉಗ್ರ ಪ್ರತಿಭಟನೆ ನಡೆಸಲಿದ್ದಾರೆ. ಸರ್ಕಾರ ಪ್ರತೀ ಪಂಚಾಯತ್‌ನಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಜನರ ಅಭಿಪ್ರಾಯವನ್ನು ಪಡೆದುಕೊಂಡು ಕಸ್ತೂರಿ ರಂಗನ್ ವರದಿಯಲ್ಲಿ ಇರುವಂತಹ ಗೊಂದಲಗಳನ್ನು ನಿವಾರಿಸಿ ಉಪಗ್ರಹ ಮುಖಾಂತರ ನಡೆದಂತಹ ಸರ್ವೇಯನ್ನು ಬಿಟ್ಟು ವಾಸ್ತವದ ಸರ್ವೇಯನ್ನು ನಡೆಸಬೇಕಾಗಿ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಸತೀಶ್ ಶೆಟ್ಟಿ ಮಟ್ಲುಪಾಡಿ ತಿಳಿಸಿದ್ದಾರೆ.


2013 ನವಂಬರ್ ತಿಂಗಳಲ್ಲಿ ಅಂದಿನ ಕೇಂದ್ರದ ಯುಪಿಎ ಸರ್ಕಾರ ಕಸ್ತೂರಿ ರಂಗನ್ ವರದಿ ಮಾಡಿತ್ತು. ಕಾರ್ಕಳದ 13 ಗ್ರಾಮಗಳು ಇದಕ್ಕೆ ಒಳಪಡಲಿದ್ದು ಉಡುಪಿ ಜಿಲ್ಲೆಯ 37 ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಆ ಸಂದರ್ಭ ಕಾರ್ಕಳದ ಇಡೀ ಜನತೆ ವರದಿಯನ್ನು ವಿರೋಧಿಸಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ನಾನು ಉಡುಪಿ ಜಿಲ್ಲೆ ಕಸ್ತೂರಿ ರಂಗನ್ ವರದಿ ವಿರೋಧಿ ಸಮಿತಿಯ ಜಿಲ್ಲಾಧ್ಯಕ್ಷನಾಗಿ ಇಡೀ ಉಡುಪಿ ಜಿಲ್ಲೆಯಲ್ಲಿ ಜನರನ್ನು ಒಟ್ಟು ಸೇರಿಸಿ ಪ್ರತಿಭಟನೆಯನ್ನು ಮಾಡಿದ್ದೆವು. ಈ ಸಂದರ್ಭದಲ್ಲಿ ಇಡೀ ಹೋರಾಟಕ್ಕೆ ಸಮರ್ಥವಾಗಿ ಬೆಂಬಲಿಸಿ ಹೋರಾಟ ಮಾಡುವಲ್ಲಿ ಕಾರ್ಕಳದ ಅಂದಿನ ಶಾಸಕರಾದ ವಿ ಸುನಿಲ್ ಕುಮಾರ್ ಅವರು ಈ ಹೋರಾಟದಲ್ಲಿ ಇಡೀ ರಾಜ್ಯವನ್ನೇ ಗಮನ ಸೆಳೆದಿದ್ದರು. ಹಾಗೆಯೇ ಕುಂದಾಪುರದ ಶಾಸಕರು, ಬೈಂದೂರಿನ ಶಾಸಕರು ಮತ್ತು ಜನಪ್ರತಿನಿಧಿಗಳು ಈ ಜನಪರ ಹೋರಾಟವನ್ನು ಬೆಂಬಲಿಸಿ ಸಹಕಾರವನ್ನು ನೀಡಿದ್ದರು. ನನ್ನ ನೇತೃತ್ವದಲ್ಲಿ 20ಕ್ಕೂ ಮೇಲ್ಪಟ್ಟು ಸಭೆಯನ್ನು ಉಡುಪಿ ಜಿಲ್ಲೆಯಾದ್ಯಂತ ನಡೆಸಿ ಲಕ್ಷಾಂತರ ಜನರಿಗೆ ಧೈರ್ಯವನ್ನು ತುಂಬಿದ್ದೆವು. ಜನರ ತೀವ್ರ ಹೋರಾಟಕ್ಕೆ ಮಣಿದ ಅಂದಿನ ರಾಜ್ಯ ಸರ್ಕಾರ ವರದಿ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿತ್ತು ಆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ರಾಜ್ಯ ಸರ್ಕಾರಗಳು ಕೂಡ ವರದಿಯನ್ನು ವಿರೋಧಿಸಿ ವರದಿ ಸಲ್ಲಿಸಿತ್ತು.
ಇದೀಗ ಮತ್ತೆ ಕೇಂದ್ರ ಸರ್ಕಾರ ರಾಜ್ಯಗಳ ಅಭಿಪ್ರಾಯ ಕೇಳಿದ್ದು ರಾಜ್ಯ ಸರ್ಕಾರ ವರದಿ ನೀಡುವ ಸಂದರ್ಭ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಕಸ್ತೂರಿರಂಗನ್ ವರದಿಗೆ ಇದರ ಬಗ್ಗೆ ಸ್ಥಳೀಯ ಶಾಸಕರು, ಸಂಸದರು ಈಗಾಗಲೇ ರಾಜ್ಯ ಸರ್ಕಾರಕ್ಕೆ ಒತ್ತಡವನ್ನು ಹೇರಿದ್ದು ರಾಜ್ಯ ಸರ್ಕಾರ ಎಲ್ಲಾ ಸ್ಥರದ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ವರದಿ ನೀಡುವಂತೆ ನಾನು ಆಗ್ರಹಿಸುತ್ತೇನೆ.
ಹಾಗೆಯೇ ವರದಿಯಲ್ಲಿರುವ ಕೆಲವೊಂದು ಷರತ್ತುಗಳಿಗೆ ವಿನಾಯಿತಿ ನೀಡಬೇಕು. ಈಗಿರುವ ನಿರ್ಬಂಧಿತ ಪ್ರದೇಶವನ್ನು ಕೈಬಿಟ್ಟು ಅದನ್ನು 0.00 ಕಿಲೋಮೀಟರ್ ಅಂದರೆ ಅರಣ್ಯದ ಗಡಿ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಬೇಕು. ಹಾಗೂ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗೆ ಯಾವುದೇ ಅಡೆತಡೆ ಇಲ್ಲದೆ, ಅದರಲ್ಲೂ ಮುಖ್ಯವಾಗಿ ಕಸ್ತೂರಿರಂಗನ್ ವರದಿ ಬಗ್ಗೆ ಜನರಲ್ಲಿ ಮೂಡಿರುವ ಭಯವನ್ನು ರಾಜ್ಯಸರ್ಕಾರ ನಿವಾರಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ.
ಕಸ್ತೂರಿ ರಂಗನ್ ವರದಿ ಮಂಡನೆ ಆಗುವ ಮೊದಲೇ ಗಾಡ್ಲಿಲ್ ವರದಿ ಬಂದಿದ್ದು ನಾವು ಇಂತಹ ಜನ ವಿರೋಧಿ ಯೋಜನೆಗಳಿಗೆ ಆರಂಭದಿಂದಲೇ ಹೋರಾಟ ಮಾಡಿಕೊಂಡು ಬಂದವರು. ಒಂದು ವೇಳೆ ರಾಜ್ಯ ಸರ್ಕಾರ ಜನರ ಅಭಿಪ್ರಾಯ ಪಡೆಯದೇ ಏಕಾ ಏಕಿ ವರದಿ ಸಲ್ಲಿಸಿದರೆ ನಾವು ಉಗ್ರ ಹೋರಾಟ ಮಾಡಬೇಕಾದೀತು. ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಸತೀಶ್ ಶೆಟ್ಟಿ ಮುಟ್ಲುಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page