
ಕಾರ್ಕಳ ಎಂದಾಕ್ಷಣ ನೆನಪಾಗುವುದು ಹಚ್ಚಹಸುರಿನ ತಾಣ ಕರಿಕಲ್ಲಿನ ಸುಂದರ ಬೀಡು.ತನ್ನದೇ ಆದ ಐತಿಹಾಸಿಕ ವಿಚಾರ ಒಳಗೊಂಡು ಆ ಮೂಲಕ ಜನರ ಮನೆ ಮನಸು ಭಾವಗಳಲ್ಲಿ ಜೊತೆಯಾದ ಊರು ನಮ್ಮೂರು ಕಾರ್ಕಳ.
ಎಲ್ಲಾ ವಿಚಾರಗಳಿಗೂ ಸ್ಪೂರ್ತಿಯಾಗಿರುವ ಮಾದರಿಯಂತೆನಿಸಿದೆ ನಮ್ಮ ಕಾರ್ಕಳ.ಆದರೆ ಇದೆ ಕಾರ್ಕಳದ ಅಂದವನ್ನು ಕೆಡಿಸುತ್ತಿದೆ ಕಸದ ರಾಶಿಗಳು.
ಹೌದು, ಕಾರ್ಕಳ ನಗರ ವ್ಯಾಪ್ತಿಯ ಬೈಪಾಸಿನಿಂದ ಉಡುಪಿ ಗೆ ತೆರಳುವ ಮುಖ್ಯ ರಸ್ತೆಯ ಬದಿಯಲ್ಲಿ ಕಸಗಳ ರಾಶಿ ಅಲ್ಲಲ್ಲಿ ಕಾಣಿಸಿರುತ್ತದೆ.ಪ್ರಜ್ಞಾವಂತರು ಎನಿಸಿಕೊಂಡ ನಮ್ಮ ಊರಲ್ಲಿ ಪ್ರಜ್ಞತಹೀನರಾಗಿ ವರ್ತಿಸುತ್ತಿರುವುದು ನಮ್ಮ ದೌರ್ಭಾಗ್ಯ.
ಸ್ವಚ್ಛ ಕಾರ್ಕಳವಾಗಬೇಕೆನ್ನುವ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳು ನಿರಂತರವಾಗಿ ಸ್ವಚ್ಛ ಕಾರ್ಯಕ್ರಮ ನಡಿಸಿ ಆ ಮೂಲಕ ನಾಗರೀಕ ಬಂಧುಗಳಿಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದರೂ ಕೆಲವು ಅನಾಗರಿಕರು ಎಲ್ಲೆಂದರಲ್ಲಿ ಕಸ ಬಿಸಾಡಿ ನಗರದ ಸೌಂದರ್ಯ ಕೆಡಿಸುತ್ತಿರುವುದು ವಿಪರ್ಯಾಸ ,ಎಲ್ಲೆಂದರಲ್ಲಿ ಕಸ ಸುರಿಯುವವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವಂತೆ ವಿನಂತಿ
-ಧೀರಾಜ್ ರಾವ್ ಕಾರ್ಕಳ