
ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಸಂಸ್ಥೆಯ ಸ್ಥಾಪಕಾಧ್ಯಕ್ಷರ ವಿರುದ್ಧ ಯೋಗೀಶ್ ಆಚಾರ್ಯ ಇನ್ನಾ ಎನ್ನುವಾತ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ,ಸುಳ್ಳು ಮಾನಹಾನಿಕಾರಕ ಬರಹಗಳನ್ನು ಪ್ರಕಟಿಸಿದ್ದು ಈ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕರಕರಿ ಫ್ರೆಂಡ್ಸ್ ಬಳಗದ ಅಧ್ಯಕ್ಷರು ದೂರು ನೀಡಿದ್ದಾರೆ.
ಈ ಮಾನಹಾನಿಕಾರಕ ಪೋಸ್ಟ್ ನಿಂದ ಸಂಸ್ಥೆಯ ಸದಸ್ಯರ ಮತ್ತು ಹಿತೈಷಿಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು ಸಂಸ್ಥೆಯ ಗೌರವಕ್ಕೆ ತೀವ್ರ ಹಾನಿಯಾಗಿದೆ,ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿರುವ ಯೋಗೀಶ್ ಆಚಾರ್ಯ ಇನ್ನಾ ಎಂಬ ವ್ಯಕ್ತಿಯ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈ ಗೊಳ್ಳುವಂತೆ ಸಂಸ್ಥೆಯ ಅಧ್ಯಕ್ಷರು ದೂರು ದಾಖಲಿಸಿದ್ದಾರೆ.




























