30.8 C
Udupi
Saturday, April 25, 2026
spot_img
spot_img
HomeBlogಕನ್ನಡ ಸಂಘ ಕಾಂತಾವರ,ಅಲ್ಲಮಪ್ರಭು ಪೀಠ ಕಾಂತಾವರ,ಅಖಿಲ ಭಾರತೀಯ ಸಾಹಿತ್ಯ ಪರಿಷದ್,ಕಾರ್ಕಳ ಸಮಿತಿ:ಉಪನಿಷದ್ ವರ್ಷ-ತಿಂಗಳ ಉಪನ್ಯಾಸ ಮಾಲೆ

ಕನ್ನಡ ಸಂಘ ಕಾಂತಾವರ,ಅಲ್ಲಮಪ್ರಭು ಪೀಠ ಕಾಂತಾವರ,ಅಖಿಲ ಭಾರತೀಯ ಸಾಹಿತ್ಯ ಪರಿಷದ್,ಕಾರ್ಕಳ ಸಮಿತಿ:ಉಪನಿಷದ್ ವರ್ಷ-ತಿಂಗಳ ಉಪನ್ಯಾಸ ಮಾಲೆ

ಕಾರ್ಕಳ :ವೇದಾಂತ ದರ್ಶನಗಳ ಅಧ್ಯಯನದಿಂದಲೇ ನಾವು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಅರಿತುಕೊಳ್ಳಲು ಸಾಧ್ಯವಿದೆ. ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಉಪನಿಷತ್ತುಗಳೆಂಬ ಪ್ರಸ್ಥಾನತ್ರಯಗಳಲ್ಲಿ ಉಪನಿಷತ್ತುಗಳು ವೇದದ ಭಾಗವೇ ಆಗಿರುವುದಾಗಿ ವೇದವಿದ್ವಾಂಸರಾದ ಡಾ. ಕಾರ್ತಿಕ್ ವಾಗ್ಳೆ ಪಂಚನಬೆಟ್ಟು ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕನ್ನಡ‌ ಸಂಘ ಕಾಂತಾವರ, ಅಖಿಲ ಭಾರತೀಯ ‌ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ಸಪ್ಟೆಂಬರ್ ೨೮ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ‌ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಮಾಂಡೂಕ್ಯ ಉಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಿದರು.
ಅರ್ಥವೇದದಲ್ಲಿ ಬರುವ ಮಾಂಡೂಕ್ಯ ಉಪನಿಷತ್ ಗಾತ್ರದ ದೃಷ್ಟಿಯಿಂದ ಹನ್ನೆರಡು ಮಂತ್ರಗಳುಳ್ಳ ಸಣ್ಣ ಉಪನಿಷತ್ತು ಆದರೂ ಮೋಕ್ಷಾಪೇಕ್ಷಿಗಳಿಗೆ ಇದು ಅತ್ಯಂತ ಮಹತ್ವಪೂರ್ಣವಾದ ಉಪನಿಷತ್ ಆಗಿದ್ದು ಬ್ರಹ್ಮ ಜ್ಞಾನವನ್ನು ಹೊಂದುವುದರಿಂದ ಲೌಕಿಕದ ಮೇಲಿನ ಮೋಹ ಕಳೆದು ಮೋಕ್ಷದೆಡೆಗೆ ಸಾಗುವ ಸಾಧನಾ ಮಾರ್ಗವನ್ನು ಇದು ವಿವರಿಸುತ್ತದೆ ಎಂದರು.


ಡಾ.ನಾ.ಮೊಗಸಾಲೆ, ಎಸ್.ನಿತ್ಯಾನಂದ ಪೈ, ಶ್ರೀಮತಿ ಮಿತ್ರಪ್ರಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶಾರ್ವರಿಯವರು ಪ್ರಾರ್ಥಿಸಿ ಮಾಲತಿ ವಸಂತರಾಜ್ ಅವರು ಅತಿಥಿಗಳನ್ನು ಪರಿಚಯಿಸಿದರು. ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಶೈಲಜಾ ಹೆಗ್ಡೆ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page