ವಿನೇಶ್ ಅನರ್ಹ ವಿಚಾರ, ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ CAS

ಪ್ಯಾರಿಸ್ ಒಲಂಪಿಕ್ಸ್ 2024, ರಿಂದ ಕುಸ್ತಿಪಟು ವಿನೇಶ ಫೋಗಟ್ ಪಂದ್ಯದಿಂದ ತೂಕ ಹೆಚ್ಚಿರುವ ಕಾರಣ ಅನರ್ಹ ಗೊಂಡಿದ್ದಾರೆ.
ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿನ ತೂಕವಿರುವ ಕಾರಣ ಭಾರತದ ಕುಸ್ತಿಪಟು ವಿನೇಶ್ ಸ್ಪರ್ಧಿಯಿಂದ ಅನರ್ಹಗೊಂಡಿದ್ದು, ಈ ವಿಚಾರದ ಕುರಿತು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಇದೀಗ ಮನವಿಯ ಕುರಿತು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು, ಒಲಂಪಿಕ್ಸ್ ಅಂತ್ಯದ ವೇಳೆಗೆ ಆಗಸ್ಟ್ 11ಕ್ಕೂ ಮುನ್ನ ತೀರ್ಪು ನೀಡುವುದಾಗಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.













