32.9 C
Udupi
Saturday, April 25, 2026
spot_img
spot_img
HomeBlogಎಕ್ಸಲೆಂಟ್ ಮೂಡುಬಿದಿರೆ:ವನಮಹೋತ್ಸವ ಕಾರ್ಯಕ್ರಮ, "ಪ್ರಕೃತಿಯ ಉಳಿವು, ನಮ್ಮೆಲ್ಲರ ಉಳಿವು" - ಶ್ರೀಮತಿ ಪ್ರಸನ್ನ ಪಡ್ಡಂದಡ್ಕ

ಎಕ್ಸಲೆಂಟ್ ಮೂಡುಬಿದಿರೆ:ವನಮಹೋತ್ಸವ ಕಾರ್ಯಕ್ರಮ, “ಪ್ರಕೃತಿಯ ಉಳಿವು, ನಮ್ಮೆಲ್ಲರ ಉಳಿವು” – ಶ್ರೀಮತಿ ಪ್ರಸನ್ನ ಪಡ್ಡಂದಡ್ಕ

ಮೂಡುಬಿದಿರೆ: ‘ ಪರಿಸರ ಉಳಿಸಿ, ಪರಿಸರ ಬೆಳೆಸಿ ‘ ಎನ್ನುವ ಉಕ್ತಿಯಂತೆ ಎಕ್ಸಲೆಂಟ್ ಸಿಬಿಎಸ್ಇ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ವನಮಹೋತ್ಸವ ಕಾರ್ಯಕ್ರಮವನ್ನು ಪಡ್ಡಂದಡ್ಕ ಗ್ರಾಮದ ಪರಿಸರ ಪ್ರೇಮಿ ಶ್ರೀಮತಿ ಪ್ರಸನ್ನ ರವರ ಮನೆಯ ಸುತ್ತಮುತ್ತಲಿನ ವಿಶಾಲ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದ ಮೂಲ ರೂವಾರಿ ಎಕ್ಸಲೆಂಟ್ ಸಂಸ್ಥೆಯ
ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್ ರವರು ಸ್ವತಃ ತಾವೇ ಗಿಡವನ್ನು ನೆಡುವ ಮೂಲಕ ಮಕ್ಕಳಿಗೆ ಪರಿಸರದ ಹಾಗೂ ವನಸಂಪತ್ತಿನ ಉಳಿವಿನ ಅರಿವು ಮೂಡಿಸಿದರು. ಪರಿಸರ ಪ್ರೇಮಿಯಾದ ಶ್ರೀಮತಿ ಪ್ರಸನ್ನ ರವರು ಮಾತನಾಡಿ ‘ಪ್ರಕೃತಿಯ ಉಳಿವು ನಮ್ಮೆಲ್ಲರ ಉಳಿವು’ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯ ಎಂದು ಮಕ್ಕಳಿಗೆ ತಿಳಿಸಿದರು. ಈ
ಕಾರ್ಯಕ್ರಮದಲ್ಲಿ ಪ್ರಸನ್ನ ರವರ ಪುತ್ರಿಯಾದ ಶ್ರೀಮತಿ ಹೇಮಲತಾ ರವರು ಉಪಸ್ಥಿತರಿದ್ದರು . ಶಿಕ್ಷಕಿಯಾದ ಕುಮಾರಿ ಪ್ರಜ್ಞಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page