24.6 C
Udupi
Saturday, March 15, 2025
spot_img
spot_img
HomeBlogಎಂಡಿಎಚ್‌ ಹಾಗೂ ಎವರೆಸ್ಟ್‌ ಬ್ರ್ಯಾಂಡ್‌ನ ಕೆಲವೊಂದು ಉತ್ಪನ್ನಗಳು ಬಳಕೆಗೆ ಸುರಕ್ಷಿತವಲ್ಲ: ರಾಜಸ್ಥಾನ ಸರ್ಕಾರ

ಎಂಡಿಎಚ್‌ ಹಾಗೂ ಎವರೆಸ್ಟ್‌ ಬ್ರ್ಯಾಂಡ್‌ನ ಕೆಲವೊಂದು ಉತ್ಪನ್ನಗಳು ಬಳಕೆಗೆ ಸುರಕ್ಷಿತವಲ್ಲ: ರಾಜಸ್ಥಾನ ಸರ್ಕಾರ

ಜೈಪುರ: ರಾಜಸ್ಥಾನ ಸರ್ಕಾರವು ದೇಶದಲ್ಲಿ ಹೆಚ್ಚು ಮಾರಾಟವಾಗುವ ಜನಪ್ರಿಯ ಸಂಬಾರ ಪದಾರ್ಥಗಳಾದ ಎಂಡಿಎಚ್‌ ಹಾಗೂ ಎವರೆಸ್ಟ್‌ ಬ್ರ್ಯಾಂಡ್‌ನ ಕೆಲವೊಂದು ಉತ್ಪನ್ನಗಳು ಬಳಕೆಗೆ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಮಾಹಿತಿ ನೀಡಿದೆ.

ರಾಜಸ್ಥಾನ ಸರ್ಕಾರವು ಈ ಎರಡೂ ಕಂಪನಿಗಳ ಕೆಲವೊಂದು ಉತ್ಪನ್ನಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅವು ಬಳಕೆಗೆ ಸುರಕ್ಷಿತವಲ್ಲ ಎಂಬ ಅಂಶ ಕಂಡುಬಂದಿದೆ. ಹೀಗಾಗಿ ರಾಜಸ್ಥಾನದ ಹಿರಿಯ ಆರೋಗ್ಯ ಅಧಿಕಾರಿ ಶುಭ್ರಾ ಸಿಂಗ್‌ ಅವರು ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

ಹಾಂಕಾಂಗ್ ಎಂಡಿಎಚ್‌ ಕಂಪನಿಯ 2 ಹಾಗೂ ಎವರೆಸ್ಟ್‌ ಕಂಪನಿಯ ಒಂದು ಮಸಾಲಾ ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಕ್ರಿಮಿನಾಶಕವಾಗಿರುವ ಎಥಿಲಿನ್‌ ಆಕ್ಸೈಡ್‌ ಈ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂಬ ಕಾರಣ ನೀಡಿ ಇದರ ಮಾರಾಟವನ್ನು ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸಿತ್ತು.

ಆದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಾಂಕಾಂಗ್‌, ನೇಪಾಳ ಮತ್ತು ಸಿಂಗಾಪುರ ನಿಷೇಧದ ನಡುವೆಯೇ ಮಸಾಲೆ ಪದಾರ್ಥಗಳಾದ ಎಂಡಿಎಚ್‌, ಎವರೆಸ್ಟ್‌ ಕಂಪನಿಯ ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ತಿಳಿಸುವ ಮೂಲಕ ಕ್ಲೀನ್‌ಚಿಟ್ ನೀಡಲಾಗಿತ್ತು. ಇದೀಗ ರಾಜಸ್ಥಾನ ಸರ್ಕಾರವು ಮತ್ತೆ ಈ ಮಸಾಲ ಪದಾರ್ಥಗಳು ಸುರಕ್ಷಿತವಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆದಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page