
ಗುಜರಾತ್ ನ ಆನಂದ್ ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ ಅಲ್ಲಿ ಪಾಕಿಸ್ತಾನ ಅಳುತ್ತಿದೆ ಎಂದು ಹೇಳಿದ್ದಾರೆ.
ದೇಶವು 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತವನ್ನು ಕಂಡಿದ್ದು ಈಗ ದೇಶ ಬಿಜೆಪಿಯ 10 ವರ್ಷಗಳ ಸೇವಾ ಅವಧಿಯನ್ನೂ ಕಂಡಿದೆ. ಅದು ಆಳ್ವಿಕೆ, ಇದು ಸೇವಾ ಅವಧಿ. 60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಶೇ.60ರಷ್ಟು ಗ್ರಾಮೀಣ ಜನತೆಗೆ ಶೌಚಾಲಯ ಇರಲಿಲ್ಲ. 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಶೇ 100ರಷ್ಟು ಶೌಚಾಲಯ ನಿರ್ಮಿಸಿದ್ದು 60 ವರ್ಷಗಳಲ್ಲಿ ಕಾಂಗ್ರೆಸ್ ದೇಶದ 3 ಕೋಟಿ ಗ್ರಾಮೀಣ ಮನೆಗಳಿಗೆ ಅಂದರೆ ಶೇ.20ಕ್ಕಿಂತ ಕಡಿಮೆ ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಯಿತು. ಕೇವಲ 10 ವರ್ಷಗಳಲ್ಲಿ, ನಲ್ಲಿ ನೀರು ಸರಬರಾಜು ಮಾಡುವ ಮನೆಗಳ ಸಂಖ್ಯೆ 14 ಕೋಟಿಗೆ ತಲುಪಿದೆ, ಅಂದರೆ, 75% ಮನೆಗಳಿಗೆ ನಲ್ಲಿ ನೀರು ಸರಬರಾಜು ಇದೆ ಎಂದು ಮೋದಿ ಹೇಳಿದ್ದಾರೆ.ಇಂದು ಭಾರತದಲ್ಲಿ ಕಾಂಗ್ರೆಸ್ನ್ನು ದುರ್ಬಿನ್ನಿಂದಲೂ ಹುಡುಕಲು ಸಾಧ್ಯವಾಗುತ್ತಿಲ್ಲ, ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ ಅಲ್ಲಿ ಪಾಕಿಸ್ತಾನ ಅಳುತ್ತಿದೆ ಎಂದರು.