
‘ಡಾರ್ಲಿಂಗ್’ ಪದವು ಲೈಂಗಿಕ ಅರ್ಥವನ್ನು ಹೊಂದಿದೆ ಮತ್ತು ಸೆಕ್ಷನ್ 354A (1) (4) ಅಡಿಯಲ್ಲಿ ಆಕ್ಷೇಪಾರ್ಹ ಹೇಳಿಕೆಯಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್ ಅಭಿಪ್ರಾಯಿಸಿದ್ದು ಹೀಗಾಗಿ ಇನ್ನು ಮುಂದೆ ನೀವು ಯಾರನ್ನಾದರೂ ಡಾರ್ಲಿಂಗ್ ಎಂದು ಕರೆದರೆ ಅವರು ನಿಮ್ಮ ಮೇಲೆ ಕೇಸು ದಾಖಲಿಸಿದರೆ ನೀವು ತಿಂಗಳುಗಟ್ಟಲೆ ಜೈಲು ಕಂಬಿ ಎಣಿಸಬೇಕಾದಿತು ಎಂದು ಹೇಳಿದೆ.
2015 ರಲ್ಲಿ ಅಕ್ಟೋಬರ್ 21 ರಂದು ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅಂಡಮಾನ್‌ನ ಮಾಯಾಬಂದರ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಹೆಡ್ ಕಾನ್‌ಸ್ಟೆಬಲ್‌ಗೆ ‘ಕ್ಯಾ ಡಾರ್ಲಿಂಗ್ ಚಲನ್ ಕರ್ನೆ ಆಯ್ ಹೇ ಕ್ಯಾ’ ಎಂದು ಕಾಮೆಂಟ್ ಮಾಡಿದ್ದು ಇದರಿಂದ ಕೋಪಗೊಂಡ ಆಕೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಇದೀಗ ಈ ಪ್ರಕರಣವು ಕಲ್ಕತ್ತಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.ಕಲ್ಕತ್ತಾ ಹೈಕೋರ್ಟ್ ಹಿರಿಯ ವಕೀಲ ಸುಬ್ರತೋ ಮುಖರ್ಜಿ ಡಾರ್ಲಿಂಗ್ ಪದಕ್ಕೆ ವಿಶೇಷ ಅರ್ಥವಿದೆ ಎಂದು ನಿಘಂಟಿನಲ್ಲಿ ಹೇಳಲಾಗಿದ್ದು, ಅದು ಹೇಗೆ ಅವಹೇಳನಕಾರಿ ಎಂದು ವಾದ ಮಂಡಿಸಿ “ಸಮವಸ್ತ್ರ ಧರಿಸಿದವರನ್ನು ಗೌರವಿಸಬೇಕು. ಅವರು ಉದ್ದೇಶಪೂರ್ವಕವಾಗಿ ಹೇಳಿಲ್ಲ ಆದ್ದರಿಂದ ದಂಡ ವಿಧಿಸಬಹುದು ಎಂದು ಹೇಳಿದ್ದರು. ಆದರೆ ನ್ಯಾಯಮೂರ್ತಿ ಜೆ ಸೇನ್ ಗುಪ್ತಾ ಅವರ ಪೀಠವು ‘ಡಾರ್ಲಿಂಗ್’ ಪದವು ಲೈಂಗಿಕ ಅರ್ಥವನ್ನು ಹೊಂದಿದೆ ಮತ್ತು ಸೆಕ್ಷನ್ 354A (1) (4) ಅಡಿಯಲ್ಲಿ ಆಕ್ಷೇಪಾರ್ಹ ಹೇಳಿಕೆಯಾಗಿದೆ ಎಂದು ಹೇಳಿದರು.