
ಅಯೋಧ್ಯೆಯ ರಾಮ ಮಂದಿರದ ಬಾಲರಾಮನ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು ಈಗ ರಾಮಮಂದಿರ ಟ್ರಸ್ಟ್ ರಾಮನ ಗರ್ಭಗುಡಿಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಅದೇನೆಂದರೆ ಇನ್ನು ರಾಮಮಂದಿರದಲ್ಲಿ ಅರ್ಚಕರಿಗೆ ವಸ್ತ್ರ ಸಂಹಿತೆ ಜಾರಿಯಾಗಲಿದ್ದು, ಅರ್ಚಕರು ಚೌಬಂದಿ ಪೇಟ ಹಾಗೂ ಹಳದಿ ಬಣ್ಣದ ಧೋತಿ, ಕುರ್ತಾವನ್ನು ಧರಿಸಲಿದ್ದಾರೆ. ಇದಲ್ಲದೆ ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
26 ಮಂದಿ ಅರ್ಚಕರು ವಿವಿಧ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸಿರುವ ಧಾರ್ಮಿಕ ಸಮಿತಿಯು ಹೊಸದಾಗಿ ತರಬೇತಿ ಪಡೆದ 21 ಅರ್ಚಕರನ್ನು ಸೇರಿಸಲು ನಿರ್ಧರಿಸಿದೆ. ಇದಕ್ಕಾಗಿ ಅರ್ಚಕರಿಗೆ ಗುರುತಿನ ಚೀಟಿಯನ್ನೂ ಟ್ರಸ್ಟ್ ನೀಡಿದ್ದು ಅವರ ನೇಮಕಾತಿ ಪತ್ರಗಳನ್ನು ಅವರ ಆರು ತಿಂಗಳ ತರಬೇತಿ ಪ್ರಮಾಣಪತ್ರಗಳೊಂದಿಗೆ ಜುಲೈ 3 ಅಥವಾ 5ರಂದು ಹಸ್ತಾಂತರಿಸಲಾಗುವುದು ಎನ್ನುವ ಮಾಹಿತಿ ಒದಗಿದೆ.
ಅಗತ್ಯವಿದ್ದರೆ ಸಂವಹನಕ್ಕಾಗಿ ಕೀಪ್ಯಾಡ್ ಫೋನ್ಗಳನ್ನು ಮಾತ್ರ ಬಳಸಬಹುದು. ಈ ಕ್ರಮಗಳು ಅರ್ಚಕರ ನಡುವೆ ಏಕರೂಪತೆಯನ್ನು ಕಾಯ್ದುಕೊಳ್ಳುವ ಮತ್ತು ಆವರಣದಲ್ಲಿ ಇತರರಿಂದ ಭಿನ್ನವಾಗಿಸುವ ಪ್ರಯತ್ನದ ಭಾಗವಾಗಿದೆ.