ಅಣ್ಣಾಮಲೈಗೆ ಒಲಿಯಲಿದೆಯೇ ಸಚಿವ ಸ್ಥಾನ…!

ನವದೆಹಲಿ : ಮೋದಿ ಮೂರನೇ ಬಾರಿಗೆ ಇಂದು ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.ಜವಹಾರ್ ಲಾಲ್ ನೆಹರು ನಂತರ ಭಾರತದ ಇತಿಹಾಸದಲ್ಲಿ ಸತತ ಮೂರನೇ ಬಾರಿ ಪ್ರಧಾನಿಯಾದವರಲ್ಲಿ ಮೋದಿ
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರಿಗೂ ಸಚಿವ ಸ್ಥಾನ ಒಲಿದು ಬರುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಏಳಿಗೆಗೆ ಅಣ್ಣಾಮಲೈ ಮಹತ್ತರವಾದ ಶ್ರಮ ಪಟ್ಟಿದ್ದಾರೆ. ಅಣ್ಣಾಮಲೈ ಶ್ರಮವನ್ನು ಮೆಚ್ಚಿ ಕೇಂದ್ರ ಮಂತ್ರಿ ಸ್ಥಾನ ನೀಡಲು ಎನ್‌ಡಿಎ ಮೈತ್ರಿಕೂಟ ಮುಂದಾಗಿದೆ ಎಂದು ತಿಳಿದು ಬರುತ್ತಿದೆ
ಪ್ರಧಾನಿ ಮೋದಿ ಜೊತೆಗೆ ಅವರ ನೂತನ ಸಚಿವ ಸಂಪುಟವೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೇಶದಲ್ಲಿ ಮೈತ್ರಿ ಸರ್ಕಾರದ ಶಕೆ ಮತ್ತೆ ಆರಂಭವಾಗಿದೆ.
ಪ್ರಧಾನಿ ಮೋದಿಯವರೊಂದಿಗೆ ಸುಮಾರು 30 ಸಚಿವರು ಪ್ರಧಾನಿ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಟ್ಟು ಎರಡು ಹಂತಗಳಲ್ಲಿ ಸಂಪುಟ ರಚನೆಯಾಗುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬರುತ್ತಿದೆ
.