
ಪ್ಯಾರಿಸ್: ಆಗಸ್ಟ್ 8 ಗುರುವಾರದಂದು ಒಲಿಂಪಿಕ್ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಅವರ ಮನವಿಯನ್ನು ಆರ್ಬಿಟ್ರೇಷನ್ ನ್ಯಾಯಾಲಯವು ಸ್ವೀಕರಿಸಿದ್ದು ಶುಕ್ರವಾರ ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ವಿಚಾರಣೆಗೆ ವಕೀಲರನ್ನು ನೇಮಿಸುವಂತೆ ತಿಳಿಸಿದೆ.
ಏತನ್ಮಧ್ಯೆ, ಭಾರತ ಸರ್ಕಾರವು ಖ್ಯಾತ ವಕೀಲ ಹರೀಶ್ ಸಾಳ್ವೆ ಅವರನ್ನು ಪ್ರಕರಣಕ್ಕೆ ಮಂಡಳಿಗೆ ತರುವಂತೆ ಕೇಳಿಕೊಂಡಿದ್ದು ವಕೀಲರು ಸಂಜೆ 6 ಗಂಟೆಗೆ (ಪ್ಯಾರಿಸ್ ಸಮಯ) ನೇಮಿಸಬೇಕಾಗುತ್ತದೆ, ಇದನ್ನು CASಗೆ ತಿಳಿಸಬೇಕು ಮತ್ತು ವಿಚಾರಣೆ ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ.
ಭಾರತೀಯ ತಂಡವು CAS ವಿಚಾರಣೆಗೆ ಭಾರತೀಯ ವಕೀಲರನ್ನು ನೇಮಿಸಲು ಸಮಯಾವಕಾಶ ಕೇಳಿದ್ದು ಹೀಗಾಗಿ ಅವರಿಗೆ ತಮ್ಮ ವಕೀಲರನ್ನು ನೇಮಿಸಲು ಗುರುವಾರ 9:30 ಭಾರತೀಯ ಕಾಲಮಾನದ ವರೆಗೆ ಸಮಯ ನೀಡಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕುಸ್ತಿ ಫೆಡರೇಶನ್‌ನ ಮುಖ್ಯಸ್ಥ ಸಂಜಯ್ ಸಿಂಗ್ ದುಃಖದ ಮನಃಸ್ಥಿತಿಯಲ್ಲಿರುವಾಗ ಕ್ರೀಡೆಯಿಂದ ನಿವೃತ್ತಿಯಾಗುವಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ಒತ್ತಾಯಿಸಿದ್ದಾರಲ್ಲದೇ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಎದುರು ನೋಡುತ್ತಿದ್ದಾರೆ.
ದುರದೃಷ್ಟವಶಾತ್ ಅವರ ಬಹುಕಾಲದ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಭಗ್ನಗೊಂಡಿತು. ಇದರಿಂದ ಅವರು ನಿವೃತ್ತಿಯ ನಿರ್ಧಾರ ಮಾಡಿರುವುದು ಸಾಮಾಜಿಕ ಜಾಲತಾಣದ ಮೂಲಕ ತಿಳಿಯಿತು. ಅವರ ಈ ನಿರ್ಧಾರದಿಂದ ನನಗೆ ಆಘಾತವಾಗಿದೆ. ಅವರು ನಿವೃತ್ತಿಯ ನಿರ್ಧಾರವನ್ನು ಹಿಂದೆ ತೆಗೆದುಕೊಳ್ಳಲು ಫೆಡರೇಶನ್ ವತಿಯಿಂದ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ























































































