32.5 C
Udupi
Wednesday, April 30, 2025
spot_img
spot_img
HomeBlogಆದಿ ದ್ರಾವಿಡ ಸಮುದಾಯದ ಸಮಸ್ಯೆಗಳ ಬಗ್ಗೆ ,

ಆದಿ ದ್ರಾವಿಡ ಸಮುದಾಯದ ಸಮಸ್ಯೆಗಳ ಬಗ್ಗೆ ,

ಸದನದಲ್ಲಿ, ಸರಕಾರದ ಗಮನ ಸೆಳೆದ ಶಾಸಕ ವಿ. ಸುನಿಲ್ ಕುಮಾರ್ ಪ್ರಯತ್ನ ಶ್ಲಾಘನೀಯ : ಶ್ರೀನಿವಾಸ್ ಕಾರ್ಲ


ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಈ ಬಾರಿ ಕಾರ್ಕಳ ಶಾಸಕರಾದ ವಿ. ಸುನಿಲ್‌ ಕುಮಾರ್‌ ರವರು ಕರಾವಳಿಯ ಸಮಸ್ಯೆಗಳ ಕುರಿತು ಮಾತಾಡುತ್ತಿರುವಾಗ ,ಅದರಲ್ಲಿ ವಿಷೇಶವಾಗಿ ನಮ್ಮ ಆದಿದ್ರಾವಿಡ ಸಮಾಜದ ಸತ್ಯಸಾರಮಾಣಿ ದೇವಸ್ಥಾನಗಳ ಭೂಮಿಗಳ ಸಮಸ್ಯೆಗಳ ಕುರಿತು ಗಟ್ಟಿ ಧ್ವನಿಯಲ್ಲಿ ಮಾತಾಡಿರುವುದು ಇಡೀ ನಮ್ಮ ಆದಿ ದ್ರಾವಿಡ ಸಮಾಜಕ್ಕೆ ಅತ್ಯಂತ ಸಂತೋಷವಾಗಿದೆ.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಪರಿಶಿಷ್ಟ ಜಾತಿಗೆ ಸೇರಿದಂತೆ ಆದಿ ದ್ರಾವಿಡ ಸಮುದಾಯದ ಜನರಿದ್ದಾರೆ. ಈ ನಮ್ಮ ಸಮುದಾಯದ ಕುಲದೇವರುಗಳಾದ ಸತ್ಯಸಾರಮಾಣಿ ದೈವಸ್ಥಾನಗಳು ಪ್ರತಿ ಗ್ರಾಮಗಳಲ್ಲಿ ಇದೆ. ಆದರೆ ಹೆಚ್ಚಿನ ದೈವಸ್ಥಾನಗಳು ಅದಕ್ಕೆ ಸಂಬಂಧಿಸಿದ ಭೂಮಿಗೆ ಯಾವುದೇ ಪಹಣಿಯನ್ನು ಹೊಂದಿರುವುದಿಲ್ಲ ದಶಕಗಳಿಂದ ಈ ಸಮುದಾಯದ ಜನ ತಮ್ಮ ದೈವಸ್ಥಾನದ ಜಾಗದ ದಾಖಲೆಗಳನ್ನು ಮಾಡಲು ಅಲೆದಾಡುತ್ತಿದ್ದಾರೆ. ಈ ಕಾರಣದಿಂದಾಗಿ ಸರ್ಕಾರದಿಂದ ಯಾವುದೇ ಪ್ರಯೋಜನಗಳನ್ನು ಅನುದಾನಗಳನ್ನು ಪಡೆಯಲು ಸಾದ್ಯವಾಗುತ್ತಿಲ್ಲ.
ಇದನ್ನು ಮನಗಂಡು ಶಾಸಕರು ಇಂತಹ ದೈವಸ್ಥಾನಗಳ ಭೂ ದಾಖಲೆಗಳನ್ನು ಸರಿಪಡಿಸುವುದಕ್ಕೆ ನಿರಂತರ ಪ್ರಯತ್ನವನ್ನು ಪಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ವಿಧಾನ ಸಭಾ ಅಧಿವೇಶನದಲ್ಲಿ ಈ ದೈವಸ್ಥಾನಗಳ ದಾಖಲೆಗಳನ್ನು ಸರಿ ಪಡಿಸಲು ಸರ್ಕಾರ ವಿಷೇಶ ಶ್ರಮ ವಹಿಸಿ ಕಂದಾಯ ಇಲಾಖೆ ವಿಶೇಷ ಅದಾಲತ್‌ ನಡೆಸಿ ದೈವಸ್ಥಾನಗಳ ಹೆಸರಿನಲ್ಲಿ ಪಹಣಿಯನ್ನು ನೀಡಬೇಕು ಎಂದು ಸರಕಾರದ ಗಮನವನ್ನು ಸೆಳೆದ ಶಾಸಕರ ಪ್ರಯತ್ನ ಖಂಡಿತವಾಗಿಯೂ ಶ್ಲಾಘನೀಯ.


ಸ್ವರ್ಣ ಕಾರ್ಕಳದ ಕನಸ್ಸು ಕಟ್ಟಿಕೊಂಡು ಅನೇಕ ಒಳ್ಳೆಯ ಯೋಚನೆ ಮತ್ತು ಯೋಜನೆಗಳನ್ನು ಹಾಕಿ ಕೊಂಡು ನಿರಂತರವಾಗಿ ಅತ್ಯಂತ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮ ವಹಿಸುತ್ತಿರುವ ಶಾಸಕರ ಕನಸಿನ ಯೋಜನೆ ಕಾರ್ಕಳ ನಗರ ಭಾಗದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಅದ್ಭುತವಾಗಿ ಮೂಡಿ ಬರುತ್ತಿದೆ. ಇದು ನಮ್ಮ ಸಮುದಾಯದವರಿಗೆ ಮುಂದಿನ ದಿನಗಳಲ್ಲಿ ತುಂಬಾ ತುಂಬಾ ಅನುಕೂಲವಾಗಲಿದೆ.
ನಮ್ಮೊಂದಿಗೆ ಸದಾ ಜೊತೆಯಲ್ಲಿ ಇದ್ದುಕೊಂಡು ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಮಾನಯ ಶಾಸಕರಾದ ವಿ ಸುನಿಲ್‌ ಕುಮಾರ್‌ ರವರಿಗೆ ನಮ್ಮ ಆದಿ ದ್ರಾವಿಡ ಸಮುದಾಯದ ಪರವಾಗಿ ಹಾಗೂ ನಮ್ಮ ತಾಲೂಕಿನ ಸತ್ಯಸಾರಮಾಣಿ ದೈವಸ್ಥಾನದ ಎಲ್ಲಾ ಸುಮಿತಿಯ ಪರವಾಗಿ ಧನ್ಯವಾದಗಳು ಎಂದು ಆದಿ ದ್ರಾವಿಡ್ ರಾಜ್ಯ ಉಪಾಧ್ಯಕ್ಷರಾದ ಶ್ರೀನಿವಾಸ್ ಕಾರ್ಲ ತಿಳಿಸಿದ್ದಾರೆ.


spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page