ಭಾರಿ ಕುತೂಹಲದಲ್ಲಿರುವ ಪ್ರೇಕ್ಷಕರು

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರೋಚಕವಾಗಿ ಸಾಗುತ್ತಿದ್ದು ಇದೀಗ Expect the unexpected ಎಂಬ ಥೀಮ್ನಲ್ಲಿ ಮಿಡ್ ಸೀಸನ್ ಫಿನಾಲೆ ನಡೆಯಲಿದೆ.
ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದ್ದು ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ. ಈ ಫಿನಾಲೆಯಲ್ಲಿ ಭಾರೀ `ಎಲಿಮಿನೇಷನ್’ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ.
ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ. ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅಕ್ಟೋಬರ್ 18 ಮತ್ತು 19 ರಂದು ರಾತ್ರಿ 8 ರಿಂದ 11 ಗಂಟೆಗಳವರೆಗೆ ಒಟ್ಟು 6 ಗಂಟೆಗಳ ಮನರಂಜನಾ ಸಂಭ್ರಮ ಇದಾಗಿದ್ದು ಮಿಡ್ ಸೀಸನ್ ಫಿನಾಲೆ ಈಗಿನಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.




















































