
ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸಮೀಕ್ಷೆಗಳ ಲೆಕ್ಕ ತಲೆಕೆಳಗಾಗಿದ್ದು ಈ ಬಗ್ಗೆ ಹಿರಿಯ ನಟ ಪ್ರಕಾಶ್ ರೈ ಪ್ರತಿಕ್ರಿಯೆ ನೀಡಿದ್ದಾರೆ.
“ಚಕ್ರವರ್ತಿಯ ಬೆತ್ತಲೆಯಾಗಿದ್ದಾನೆ, ಈಗ ಅವನು ಬೇರೊಬ್ಬರ ಬೆಂಬಲದ ಸಹಾಯ ಪಡೆದುಕೊಳ್ಳುವಂತಾಗಿದೆ. ಭಾರತ ಮತ್ತು ಜವಾಬ್ದಾರಿಯುತ ನಾಗರಿಕ ಸಮಾಜಕ್ಕೆ ಧನ್ಯವಾದಗಳು ಅಹಂಕಾರವನ್ನು ಪಂಕ್ಚರ್ ಮಾಡಿ ಅವರ ಸ್ಥಾನವನ್ನು ತೋರಿಸಿದ್ದಕ್ಕೆ ಧನ್ಯವಾದಗಳು ನಾವು ನಮ್ಮ ದೇಶಕ್ಕಾಗಿ ಉತ್ತಮ ರೀತಿಯಲ್ಲಿ ಹೋರಾಡಿದ್ದು ಇದು ಮುಂದುವರೆಯುತ್ತದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಮಮಂದಿರದ ವಿಚಾರದಿಂದ, ಅತಿ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಚುನಾವಣೆ ದೊಡ್ಡ ಶಾಕ್ ನೀಡಿದೆ ಎನ್ನಲಾಗಿದೆ.