31 C
Udupi
Sunday, May 3, 2026
spot_img
spot_img
HomeBlogಅಪೂರ್ಣವಾಗಿರುವ, ಗುಂಡಿಗಳು ಬಿದ್ದಿರುವ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು

ಅಪೂರ್ಣವಾಗಿರುವ, ಗುಂಡಿಗಳು ಬಿದ್ದಿರುವ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೋಂದನ್ನು ನೀಡಿದ್ದು ಅದೇನೆಂದರೆ ‘ಅಪೂರ್ಣವಾಗಿರುವ, ಗುಂಡಿಗಳು ಬಿದ್ದಿರುವ ಅಥವಾ ಸಂಚರಿಸಲು ಸಾಧ್ಯವಾಗದಷ್ಟು ದಟ್ಟಣೆ ಇರುವ ಹೆದ್ದಾರಿಗಳಲ್ಲಿ ಟೋಲ್‌ ಕಟ್ಟುವಂತೆ ಪ್ರಯಾಣಿಕರನ್ನು ಒತ್ತಾಯಿಸುವಂತಿಲ್ಲ’ ಎಂದು ಆದೇಶಿಸಿ ಈ ಮೂಲಕ, ಜಾಮ್‌ ಆಗಿದ್ದ ಹೆದ್ದಾರಿಯೊಂದರಲ್ಲಿ ಸುಂಕ ವಸೂಲಾತಿ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಕಳೆದ ವಾರ ಎಡಪ್ಪಳ್ಳಿ–ಮನ್ನುತಿ ನಡುವಿನ 65 ಕಿ.ಮೀ. ಹೆದ್ದಾರಿಯಲ್ಲಿ 12 ತಾಸುಗಳ ಕಾಲ ವಾಹನದಟ್ಟಣೆಯಾಗಿದ್ದು ಈ ವೇಳೆ ನಿಂತಲ್ಲೇ ನಿಂತಿದ್ದ ಪ್ರಯಾಣಿಕರು, 150 ರು. ಸುಂಕವನ್ನು ಕಟ್ಟಬೇಕಾಗಿಲ್ಲ ಎಂದು ಆ.6ರಂದು ಹೈಕೋರ್ಟ್‌ ಹೇಳಿತ್ತು. ಇದನ್ನು ಪ್ರಶ್ನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದು ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಬಿ.ಆರ್‌. ಗವಾಯಿ, ನ್ಯಾ। ಕೆ ವಿನೋದ್‌, ಎನ್‌.ವಿ. ಅಂಜಾರಿಯಾ ಅವರ ಪೀಠ, ಸುಂಕ ವಸೂಲಾತಿಯಾಗದಿದ್ದರೆ ಆಗುವ ನಷ್ಟಕ್ಕಿಂತ ಸಾರ್ವಜನಿಕರ ಹಿತಕ್ಕೇ ಪ್ರಾಮುಖ್ಯತೆ ನೀಡಿ ಆದೇಶ ಹೊರಡಿಸಿದೆ. ‘ನಾಗರಿಕರು ಈಗಾಗಲೇ ತೆರಿಗೆ ಪಾವತಿಸಿರುವ ರಸ್ತೆಗಳಲ್ಲಿ ಮುಕ್ತವಾಗಿ, ಗಟಾರ, ಗುಂಡಿ ತುಂಬಿದ ರಸ್ತೆಯಲ್ಲಿ ಸಂಚರಿಸಲಿ’ ಎಂದು ಖಾರವಾಗಿ ಹೇಳಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page