
ಕಾರ್ಕಳ: ಜನವರಿ 26ರಂದು ಪ್ರಾರಂಭವಾದ ಅತ್ತೂರು ಜಾತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಬಬ್ಲಿ ಪ್ಯಾಕೇಜ್ ಡ್ ಡ್ರಿಂಕಿಂಗ್ ವಾಟರ್ ಎಂಬ ಹೆಸರಿನ 20 ಲೀಟರ್ ಕ್ಯಾನ್ ನಲ್ಲಿ ನೀರಿನ ವ್ಯವಸ್ಥೆ ವಿತರಣೆ ಮಾಡಲಾಗಿದ್ದು ಇದೀಗ ಆ ಕ್ಯಾನ್ ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ.
ಪೊಲೀಸರು ಈ ನೀರನ್ನು ಕುಡಿಯುವ ಸಂದರ್ಭದಲ್ಲಿ ಈ ಸತ್ತ ಕಪ್ಪೆ ಪತ್ತೆಯಾಗಿದ್ದು ಜನರ ಆರೋಗ್ಯದ ಬಗ್ಗೆ ಕಾಳಜಿ ನೀಡದ ನೀರಿನ ಕಂಪನಿಯ ಬೇಜವಾಬ್ದಾರಿ ನಿಜಕ್ಕೂ ವಿಷಾದಕರವಾಗಿದೆ.





















