ದೇಶವನ್ನು ಪ್ರತಿನಿಧಿಸಿ,ಪ್ರಥಮ ಸ್ಥಾನ ಪಡೆದ ತಂಡದಲ್ಲಿ, “ಅಂಡಾರಿನ ಪ್ರಣಿತ್”

ಅಂತಾರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ಶಿಪ್ -2024”ಕ್ಕೆ ಅಂಡಾರಿನ ಪ್ರಣಿತ್ ಆಯ್ಕೆಯಾಗಿದ್ದು,ಇವರು ಅಮೆಚೂರ್ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ಪುರುಷರ ತಂಡವನ್ನು ಪ್ರತಿನಿಧಿಸಿ, ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಈ ಪಂದ್ಯಾಟವು ಸೆಪ್ಟೆಂಬರ್ 16-18ರವರೆಗೆ ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆಯಿತು.
ಪ್ರಣಿತ್ ಇವರು ಅಂಡಾರಿನ ಸುಗುಣ – ಪ್ರಭಾಕರ್ ಎ ರಾವ್ ದಂಪತಿಗಳ ಪುತ್ರ.
ಅಂತರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಪ್-2024. ರಲ್ಲಿ ಅಂಡಾರಿನ ಪ್ರಣಿತ್ ತಂಡದಲ್ಲಿ ಆಯ್ಕೆಯಾಗಿದ್ದು ಮಾತ್ರವಲ್ಲದೆ ಅಂತಿಮವಾಗಿ ಭಾರತ ತಂಡ ವಿನ್ನರ್ ಆಗಿರುವುದು ಭಾರತದ ಹಾಗೂ ನಮ್ಮ ಕಾರ್ಕಳದ ಹೆಮ್ಮೆ.













