ದೇಶವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ತಂಡದಲ್ಲಿ, “ಆಳ್ವಾಸ್ ವಿದ್ಯಾರ್ಥಿನಿ ರೆಂಜಾಳದ ರಕ್ಷಾ”

ಅಂತಾರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ಶಿಪ್ -2024”ಕ್ಕೆ ಆಳ್ವಾಸ್ ಕಾಲೇಜ್, ಮೂಡುಬಿದ್ರಿಯ ದ್ವಿತೀಯ ಎಂ.ಎಸ್ಸಿ ರಾಸಾಯನಶಾಸ್ತ್ರದ ವಿದ್ಯಾರ್ಥಿನಿ ರೆಂಜಾಳದ ರಕ್ಷಾ ಆಯ್ಕೆಯಾಗಿದ್ದು, ಇವರು ಅಮೆಚೂರ್ ತ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾ ತಂಡವನ್ನು ಪ್ರತಿನಿಧಿಸಿ,ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ .
ಈ ಪಂದ್ಯಾಟವು ಸೆಪ್ಟೆಂಬರ್ 16-18ರವರೆಗೆ ಮಲೇಷ್ಯಾದ ಕೌಲಾಲಂಪುರ್ ನಲ್ಲಿ ನಡೆಯಿತು. ಕು. ರಕ್ಷಾ ಇವರು ರೆಂಜಾಳದ ಸುರೇಖಾ – ರವಿ ಪೂಜಾರಿ ದಂಪತಿಗಳ ಪುತ್ರಿ.
ಅಂತರಾಷ್ಟ್ರೀಯ ಮಟ್ಟದ “ಏಷ್ಯಾನ್ ತ್ರೋಬಾಲ್ ಚಾಂಪಿಯನ್ ಶಿಪ್-2024. ರಲ್ಲಿ ರೆಂಜಾಳದ ರಕ್ಷಾ ಭಾರತ ತಂಡದಲ್ಲಿ ಆಯ್ಕೆಯಾಗಿದ್ದು ಮಾತ್ರವಲ್ಲದೆ ಅಂತಿಮವಾಗಿ ಭಾರತ ತಂಡ ವಿನ್ನರ್ ಆಗಿರುವುದು ಭಾರತದ ಹಾಗೂ ಕಾರ್ಕಳದ ಹೆಮ್ಮೆಯ ವಿಷಯವಾಗಿದೆ.













