ಹಿಂದೂಗಳೆಲ್ಲರೂ ಕೈಜೋಡಿಸಿ:ಪ್ರಸಾದ್ ನಿಟ್ಟೆ, ವಿಶ್ವಹಿಂದು ಪರಿಷದ್ ಕಾರ್ಯದರ್ಶಿ ಕಾರ್ಕಳ ಪ್ರಖಂಡ

ವಿಶ್ವ ಹಿಂದೂ ಪರಿಷದ್ ನ ಗೊರಕ್ಷಾ ವಿಭಾಗ ಮತ್ತು ಬಜರಂಗದಳ ವತಿಯಿಂದ ದಿನಾಂಕ 7 – 12 – 2025 ಅದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಕಾರ್ಕಳ ಅನಂತಶಯನದಿಂದ ಬಂಡೀಮಠ ಬಸ್ ಸ್ಟಾಂಡ್ ತನಕ ಗೋವಿಗಾಗಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಅಲ್ಲಿಂದ ಕಾರ್ಕಳ ದ ಎಲ್ಲಾ ಗೋಶಾಲೆಗಳಿಗೆ ಗೊಗ್ರಾಸವನ್ನು ವಿತರಣೆ ಮಾಡಲಾಗುದು.ಗೋ ಮಾತೆಯ ರಕ್ಷಣಾ ಕಾರ್ಯಕ್ಕೆ ಹಿಂದೂಗಳೆಲ್ಲರೂ ಕೈಜೋಡಿಸಬೇಕು ಮತ್ತು ಸಂಘ ಸಂಸ್ಥೆಗಳು ದೇವಸ್ಥಾನ ಸಮಿತಿಗಳು ಎಲ್ಲರೂ ಕೈ ಜೋಡಿಸಬೇಕು ಗೊ ಗ್ರಾಸವಾಗಿ ಬೈ ಹುಲ್ಲು ಹಿಂಡಿ ಅಕ್ಕಿ ಹಸಿ ಹುಲ್ಲು ಗಳನ್ನು ಕೊಟ್ಟು ಸಹಕರಿಸಬಹುದು ಎಂದು ವಿಶ್ವಹಿಂದೂ ಪರಿಷದ್ ನ ಕಾರ್ಕಳ ಪ್ರಖಂಡ ಕಾರ್ಯದರ್ಶಿ ಪ್ರಸಾದ್ ನಿಟ್ಟೆ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಹೊರೆಕಾಣಿಕೆಯಲ್ಲಿ ಜೊತೆಯಾಗುವವರು ಗೊಗ್ರಾಸ ನೀಡುವವರು ಸುನಿಲ್ ನಿಟ್ಟೆ ,ಜಿಲ್ಲಾ ಗೊಕ್ಷಾ ಪ್ರಮುಖ್ ಶರತ್ ಸಾಣೂರು, ಪ್ರಖಂಡ ಗೋರಕ್ಷಾ ಪ್ರಮುಖ್ ಪ್ರಸಾದ್ ದೂಪದಕಟ್ಟೆ ,ವಿಎಚ್ ಪಿ ಸಹ ಗೋರಕ್ಷಾ ಪ್ರಮುಖರನ್ನು ಸಂಪರ್ಕಿಸಬಹುದು .






















































































