
ಕಾರ್ಕಳ, ಆಗಸ್ಟ್ 30: ವಿಶ್ವ ಹೃದಯ ದಿನವನ್ನು ಆಚರಿಸುವ ಅಂಗವಾಗಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಕಾರ್ಕಳದಲ್ಲಿ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ಹಾಗೂ ಹೃದಯ ರೋಗದ ಅಪಾಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವ ಉದ್ದೇಶದಿಂದ ಸಮಗ್ರ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜ್ ಅನ್ನು ಪರಿಚಯಿಸಲಾಗಿದೆ.
₹3000/- ನ ಈ ಪ್ಯಾಕೇಜ್‌ನಲ್ಲಿ ಇ ಸಿ ಜಿ, ಎಕೋ /ಟಿ ಎಂ ಟಿ, ಎಫ್ ಬಿ ಯಸ್ , ಶುಗರ್ ಪರೀಕ್ಷೆ, ಲಿಪಿಡ್ ಪ್ರೊಫೈಲ್, ಮತ್ತು ಕಿಡ್ನಿ ಫಂಕ್ಷನ್ ಟೆಸ್ಟ್‌ಗಳನ್ನು ಒಳಗೊಂಡ ಅಗತ್ಯ ರಕ್ತ ಪರೀಕ್ಷೆಗಳು, ಹೃದ್ರೋಗ ತಜ್ಞರ ಸಮಾಲೋಚನೆ ಒಳಗೊಂಡಿರುತ್ತದೆ.
ಈ ಕುರಿತು ಮಾತನಾಡಿದ ಡಾ. ಸಂಜಯ್ ಕುಮಾರ್ ಕೆ.ಆರ್., ಮುಖ್ಯ ವೈದ್ಯಾಧಿಕಾರಿ, “ಹೃದಯ ಸಂಬಂಧಿತ ಅಪಾಯಗಳು ಹಲವು ಬಾರಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೇ ಇರಬಹುದು. ನಿಯಮಿತ ಆರೋಗ್ಯ ತಪಾಸಣೆಯ ಮೂಲಕ ಇಂತಹ ಅಪಾಯಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಅಗತ್ಯ ಮುನ್ನೆಚ್ಚರಿಕೆ ಹಾಗೂ ವೈದ್ಯಕೀಯ ಸಲಹೆ ಪಡೆಯಲು ಸಾಧ್ಯವಾಗುತ್ತದೆ. ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಿರುವುದು ಅತ್ಯಂತ ಮುಖ್ಯ,” ಎಂದು ತಿಳಿಸಿದರು.
ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಕುಟುಂಬದಲ್ಲಿ ಹೃದಯ ಕಾಯಿಲೆಯ ಹಿನ್ನೆಲೆ, ಧೂಮಪಾನ ಅಥವಾ ಜಡ ಜೀವನಶೈಲಿ ಹೊಂದಿರುವವರು ಹಾಗೂ ತಮ್ಮ ಹೃದಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ಈ ತಪಾಸಣೆ ಉಪಯುಕ್ತವಾಗಿದೆ.
ಈ ತಪಾಸಣಾ ಪ್ಯಾಕೇಜ್ ಅಪಾಯಿಂಟ್‌ಮೆಂಟ್ ಆಧಾರದ ಮೇಲೆ ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 9731601150 / 08258-230583 ಅನ್ನು ಸಂಪರ್ಕಿಸಬಹುದು.






















































































