
ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಇಂದು ಬೆಳಿಗ್ಗೆ 6:30 ರಿಂದ 8:30 ರವರೆಗೆ ನಮ್ಮ ನೂತನ ಕಾರ್ಯಕ್ರಮ ಮತ್ತು “ಜೀವಜಲ ಅಭಿಯಾನ” ಈ ತಿಂಗಳಿಂದ ಪ್ರಾರಂಭಗೊಂಡಿದೆ.
.
ಈ ಬೇಸಿಗೆಯ ತೀವ್ರ ಉಷ್ಣತೆಯಿಂದ ಬಳಲುತ್ತಿರುವ ಪ್ರಾಣಿ–ಪಕ್ಷಿಗಳಿಗೆ ನೀರನ್ನು ಒದಗಿಸುವ ಉದ್ದೇಶದಿಂದ, ಪಾತ್ರೆಗಳಲ್ಲಿ ನೀರು ಇಟ್ಟು ಅವರ ದಾಹ ತಣಿಸಲು ನಮ್ಮಿಂದಾಗುವ ಸಣ್ಣ ಸಹಾಯವನ್ನು ಮಾಡಲಾಗಿದೆ.

ಇದರ ಜೊತೆಗೆ, ಶ್ರೀಗುರು ರಾಘವೇಂದ್ರ ಮಠದ ಬಳಿಯಿರುವ ಸ್ವಾತಂತ್ರ್ಯ ವನದಲ್ಲಿ “ನಕ್ಷತ್ರ ವನ” ಎಂಬ ವಿಶೇಷ ವನವನ್ನು ನಿರ್ಮಿಸಲು ರೂಪರೇಷೆ ಸಿದ್ಧಪಡಿಸಿ, ಇಂದು ಅದರ ಪ್ರಾರಂಭಿಕ ಕಾರ್ಯಕ್ಕೂ ಚಾಲನೆ ನೀಡಲಾಗಯಿತು.
ಈ ಅಭಿಯಾನದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ನ ಅನೇಕ ಸದಸ್ಯರು ಭಾಗವಹಿಸಿದ್ದರು.






















