28.4 C
Udupi
Monday, April 27, 2026
spot_img
spot_img
HomeBlogಸ್ವಚ್ಛ ಕಾರ್ಕಳ ಬ್ರಿಗೇಡ್ ನ ಮುಂದಾಳತ್ವದಲ್ಲಿ "ಗೋವಿಗಾಗಿ ಮೇವು"ಅಭಿಯಾನ

ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಮುಂದಾಳತ್ವದಲ್ಲಿ “ಗೋವಿಗಾಗಿ ಮೇವು”ಅಭಿಯಾನ

ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಮುಂದಾಳುತ್ವದಲ್ಲಿ ಗೋವಿಗಾಗಿ ಮೇವು ಅಭಿಯಾನದ 2024ನೇ ವರ್ಷದ ಕೊನೆಯ ಅಭಿಯಾನ ಕಾರ್ಕಳ ಕುಕ್ಕುಂದೂರಿನ ತೋಟಗಾರಿಕೆ ಇಲಾಖೆಯಲ್ಲಿ ದಿನಾಂಕ 20 ಅಕ್ಟೊಬರ್, ಭಾನುವಾರ ಬೆಳಗ್ಗೆ 6.30 ಯಿಂದ 9 ಘಂಟೆಯ ವರೆಗೆ ನಡೆಯಿತು.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ವದಲ್ಲಿ ಹಾಗೂ ಕುಕ್ಕುಂದೂರು ಫ್ರೆಂಡ್ಸ್(ರಿ.), ಕುಕ್ಕುಂದೂರು – ಮುಂಬೈ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಕಳ ಸೇವಾಧರ್ಮ ಇವರ ಸಹಯೋಗದೊಂದಿಗೆ ನಡೆಯಿತು.

ಅನಾದಿ ಕಾಲದಿಂದಲೂ ಗೋವು ಮನುಕುಲದ ಮನುಷ್ಯರ ಪ್ರೀತಿಪಾತ್ರವಾದ ಪ್ರಾಣಿಯಾಗಿತ್ತು. ದಿನನಿತ್ಯದ ಚಟುವಟಿಕೆಗಳಲ್ಲಿ ಸಮಭಾಗಿಯಾಗಿದ್ದ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಸಂಸ್ಕೃತಿ ಬೆಳೆಯುತ್ತಾ ಬಂತು.
ಆಧ್ಯಾತ್ಮಿಕ ಶಿಫಾರಸಿನ ಪ್ರಕಾರ, ನಾಲ್ಕು ಪುರುಷಾರ್ಥಗಳು, ಅಂದರೆ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಗೋವಿನ ಸೇವೆಯಿಂದ ಏಕಕಾಲದಲ್ಲಿ ಸಾಧಿಸಬಹುದು.
ಮನುಷ್ಯರಿಗೆ ಅಮೃತಸದೃಶವಾದ ಹಾಲನ್ನು ನೀಡುವ ಮಾತೃಸಮಾನವಾದ ಗೋವುಗಳ ಸೇವೆ ಮಾಡಲು ಇಂದಿನ ಜನಾಂಗದ ಎಲ್ಲಾ ಯುವಕ – ಯುವತಿಯರು ಕೈ ಜೋಡಿಸಬೇಕು, ಹಾಗೂ ಗೋ ಸಂತತಿಯ ಅಭಿವೃದ್ಧಿ ಆಗಿ ಸರ್ವರಿಗೂ ಇದರಿಂದ ಶ್ರೇಯಸ್ಸು ಆಗಬೇಕೆಂಬುದು ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಆಶಯ.

ಈ ವರ್ಷದ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಮುಂದಾಳುತ್ವದಲ್ಲಿ ಒಟ್ಟು 8 ಗೋವಿಗಾಗಿ ಮೇವು ಅಭಿಯಾನಗಳು ನಡೆದಿದ್ದು
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕಾರ್ಕಳ,
ಬಾರಾಡಿ ಫ್ರೆಂಡ್ಸ್ ,
ರೋಟ್ರಾಕ್ಟ್ ಕ್ಲಬ್ ಕಾರ್ಕಳ,
ಕುಕ್ಕುಂದೂರು ಫ್ರೆಂಡ್ಸ್(ರಿ.) ಕುಕ್ಕುಂದೂರು- ಮುಂಬೈ,
ಸ್ವಚ್ಛ ಬಜಗೋಳಿ ಬ್ರಿಗೇಡ್, ಶಿವ ಕೇಸರಿ ಫ್ರಂಡ್ಸ್ ಮುಡಾರು,
ಶ್ರೀ ಲಕ್ಷ್ಮೀ ಗೆಳೆಯರ ಬಳಗ ದುರ್ಗಾ,ಸಂಕ ಕಾವೇರಡ್ಕ,
ಯೂತ್ ಬಿಲ್ಲವ (ರಿ.) ಕಾರ್ಕಳ,ರಾಜ್ಯ ಅತ್ಯುತ್ತಮ ಯುವಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಮತ್ತು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಕಳ ಸೇವಾಧರ್ಮ ಸೇರಿ ಒಟ್ಟು 10 ತಂಡಗಳು ಸಹಕರಿಸಿದ್ದು, ಮುಂದೆಯೂ ಕೂಡ ಈ ಒಂದು ಪುಣ್ಯ ಕಾರ್ಯದಲ್ಲಿ ಇನ್ನೂ ಅನೇಕ ಸಂಘಟನೆಯ ಕಾರ್ಯಕರ್ತರುಗಳು ಬಂದು ಕೈ ಜೋಡಿಸಿ ಗೋ ಸಂತತಿಯ ಉಳಿವಿಗೆ ಸಹಕರಿಸಬೇಕು ಎಂಬುದು ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಕಳಕಳಿಯ ವಿನಂತಿ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page