27ನೇ ವರ್ಷದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ”ಸದ್ಭಾವನಾ -2024″

ಕುಂದಾಪುರ ತಾಲೂಕಿನ ಕೋಟದ ಗಾಂಧಿ ಮೈದಾನದಲ್ಲಿ, ಪಂಚವರ್ಣ ಯುವಕ ಮಂಡಲ ಕೋಟ(ರಿ.) ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ, ನ. 16, ಶನಿವಾರ ಇದರ 27ನೇ ವರ್ಷದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವಾದ ಸದ್ಭಾವನಾ- 2024ರ ಕಾರ್ಯಕ್ರಮದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪದ್ಮಶ್ರೀ ಶ್ರೀ ವಿಜಯ ಸಂಕೇಶ್ವರ, ಚಿತ್ರನಟ ಎಸ್. ದೊಡ್ಡಣ್ಣ ಹಾಗೂ ಯಕ್ಷ ಕಲಾಸಾಧಕರಾದ ಕೆ. ಕೃಷ್ಣಮೂರ್ತಿ ತುಂಗ ರವರು ಹಾಜರಿದ್ದರು.



















