ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಶಾಲೆಯ 9 ವಿದ್ಯಾರ್ಥಿಗಳು ಎರಡನೇ ಹಂತಕ್ಕೆ ಆಯ್ಕೆ

ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್ (S.O.F.) ನಡೆಸಿದ ವಿವಿಧ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆಯ 9 ವಿದ್ಯಾರ್ಥಿಗಳು 2ನೇ ಹಂತದ ಪರೀಕ್ಷೆ ಬರೆಯಲು ಆಯ್ಕೆಯಾಗಿರುತ್ತಾರೆ.
ಆದಿಶ್, ದೀಯ ಭಟ್,ವಾದಿರಾಜ್ ಎಸ್ ಹಿರೇಮಠ್,ಸಾಗರ್ ನಾಯಕ್,ಜೀವನ್ ಕೆ ಎಸ್ ಮತ್ತು ಜಿ ಅಭಿಜ್ಞ ಹೆಗ್ಡೆ ಇಂಟರ್ನ್ಯಾಷನಲ್ ಮ್ಯಾತ್ಮೆಟಿಕ್ಸ್ ಒಲಿಂಪಿಯಾಡ್, ಆದೀಶ್, ದೃಷ್ಟಿ ಹೆಗ್ಡೆ ಹಾಗೂ ಅನನ್ ಆರ್, ನ್ಯಾಷನಲ್ ಸೈನ್ಸ್ ಒಲಿಂಪಿಯಾಡ್ ಹಾಗೂ ಆದ್ಯ ವಿ ಭಟ್ ಮತ್ತು ದೀಯ ಭಟ್ ಇಂಟರ್ನ್ಯಾಷನಲ್ ಇಂಗ್ಲಿಷ್ ಒಲಿಂಪಿಯಾಡ್ ಅಲ್ಲಿ ಆಯ್ಕೆಯಾಗಿರುತ್ತಾರೆ.
ಇವರಿಗೆ ಸಂಸ್ಥೆಯ ಆಡಳಿತ ಮಂಡಳಿ ಶ್ರೀ ಭುವನೇಂದ್ರ ಕಾಲೇಜ್ ಟ್ರಸ್ಟ್ ನ ಕಾರ್ಯದರ್ಶಿ ಡಾ. ಮಂಜುನಾಥ್ ಎ ಕೋಟ್ಯಾನ್ ಇವರು ನಗದು ಬಹುಮಾನವನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಿದರು. ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇವರ ಈ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.






















