
ಕಾರ್ಕಳದ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶ್ರೀಮತಿ ಸೀಮಾ ಕಾಮತ್ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ)ದ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಖಾಸಗಿ ಶಾಲಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶನಿವಾರದಂದು ಬೆಂಗಳೂರಿನ ಜ್ಞಾನ ಭಾರತಿ ಆವರಣದ ಪ್ರೊಕೆ ವೆಂಕಟಗಿರಿ ಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿಈ ಪ್ರಶಸ್ತಿ ನೀಡಲಾಯಿತು.ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ) ವಿಭುಧನ್-2024 ನಾಲೆಡ್ಜ್ ಕ್ರಿಯೇಟಿವ್ ಸಂಸ್ಥೆಯವರು ನೀಡುವ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿ ಇದಾಗಿದೆ
ಶೈಕ್ಷಣಿಕ ನಿರ್ದೇಶಕರಾದ ಎಚ್.ಎಸ್. ಗಣೇಶ ಭಟ್ಟ, ನಾಲೆಡ್ಜ್ ಪಬ್ಲಿಕೇಷನ್ ಸಂಸ್ಥಾಪಕರಾದ ಬಿ.ಎನ್.ಸುನಿಲ್, ಸಮಾಜ ಸೇವಕರಾದ ಮಹೇಂದ್ರ ಮನೋತ್, ನ್ಯಾಕ್ ಸಲಹೆಗಾರರಾದ ಡಾ.ಸುಜಾತ ಶ್ಯಾನುಬಾಗ್, ಡೈಮಂಡ್ ಕಾಲೇಜು ಸಂಸ್ಥಾಪಕರಾದ ಅನಿಲ್ಕುಮಾರ ಜೋಶಿ, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ)ದ ರಾಜ್ಯಾಧ್ಯಕ್ಷರಾದ ಸುರೇಶ ಎಸ್ ಗೊಲ್ಲ, ರಾಜ್ಯ ಉಪಾಧ್ಯಕ್ಷರಾದ ಪ್ರಮೀಳ ಎನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿಧಿ ಕೋಡಿಹಳ್ಳಿಯವರುಗಳು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.













