
ಕಾರ್ಕಳ: ಕಾರ್ಕಳ ಸಿವಿಲ್ಇಂಜಿನಿಯರ್ಸ್ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ವಿಜಯರಾಜ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ರಾಕೇಶ್ ಅಮೀನ್ ಆಯ್ಕೆಯಾಗಿದ್ದಾರೆ.
ಪ್ರಕಾಶ್ ಹೊಟೇಲ್‌ನಲ್ಲಿ ನಡೆದ ಅಸೋಸಿಯೇಶನ್ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷ ರಾಗಿ ಪ್ರಕಾಶ್ ಆಚಾರ್ಯ, ಕೋಶಾದಿಕಾರಿಯಾಗಿ ಅನಿಶ್ ತೆಂಡುಲ್ಕರ್, ಜೊತೆ ಕಾರ್ಯದರ್ಶಿ ಯಾಗಿ ಸುಕೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹೇಶ್ ಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ಸುಶಾಂತ್ ಶೆಟ್ಟಿ, ತಾಂತ್ರಿಕ ಕಾರ್ಯದರ್ಶಿ ಯಾಗಿ ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ.ಗೌರವ ಸಲಹೆಗಾರರಾಗಿ ಶ್ರೀನಿವಾಸ್ ಜೆ.ಕೆ. ಪೈ, ಶಶಿಕಾಂತ ರೈ, ಅರುಣ್ ಕುಮಾರ್ ಶೆಟ್ಟಿ, ಎಚ್. ರಾಜಣ್ಣ, ಎನ್. ಎಂ. ಹೆಗ್ಡೆ, ಕಾನೂನು ಸಲಹೆಗಾರರಾಗಿ ಐ. ಆರ್. ಬಲ್ಲಾಳ್ ಹಾಗೂ ಲೆಕ್ಕ ಪರಿಶೋಧಕರಾಗಿ ಪ್ರಭಾತ್ ಕುಮಾರ್ ಜೈನ್ ಅವರನ್ನು ಆಯ್ಕೆ ಮಾಡಲಾಯಿತು.













