
ಸಾಣೂರು ಕಡಬೆಟ್ಟು ಜನನಿಬಿಡ ಪ್ರದೇಶದಲ್ಲಿರುವ ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ. 28 ರಂದು ನಡೆದಿದೆ.
ಸುಮನ್ ಶೆಟ್ಟಿ (22) ಆತ್ಮಹತ್ಯೆಗೆ ಶರಣಾದ ಯುವಕ ಹುಟ್ಟುಹಬ್ಬದ ದಿನದಂದು ಸಾಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೊರಟ ಸುಮನ್ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು. ಸ್ಥಳಕ್ಕೆ ಕಾರ್ಕಳ ಅಗ್ನಿಶಾಮಕದಳ ಸಿಬ್ಬಂದಿ ತೆರಳಿ ಮೃತ ದೇಹವನ್ನು ಮೇಲಕ್ಕೆತ್ತಿದ್ದು ಕಾರ್ಕಳ ನಗರದಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.













