
ಕಾರ್ಕಳ: ಕಾರ್ಕಳ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಸಿ.ಬಿ.ಎಸ್.ಇ ಹತ್ತನೇ ತರಗತಿಯ ಪ್ರಸಕ್ತ ಶೈಕ್ಷಣಿಕ 2024-25 ರ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ದಾಖಲಿಸಿದೆ. ಕುಮಾರಿ ಆರ್.ಶ್ರೀಯಾ ಪ್ರಭು ಶೇಕಡಾ 95.6 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು, ಕುಮಾರಿ ಬೋಳ ಅಕ್ಷರ ಕಾಮತ್ ಶೇಕಡಾ 95.2ಅಂಕಗಳನ್ನು ಗಳಿಸಿ ಶಾಲೆಗೆ ದ್ವಿತೀಯ ಸ್ಥಾನವನ್ನು,ಕುಮಾರಿ ಪ್ರಾಚೀ ಆರ್.ಜೈನ್ ಶೇಕಡಾ 90 ಅಂಕಗಳನ್ನು ಗಳಿಸಿ ಶಾಲೆಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಸಮನ್ವಿ ಎ . ಶೆಟ್ಟಿಗಾರ್ 89%,ಪ್ರಕೃತಿ ಆರ್. ಜೈನ್ 87.4%, ಸುಜಲ್ ಶ್ರೀಕಾಂತ 85.8%ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಯಾಗಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯಲ್ಲಿ ಪೂಜ್ಯ ಗುರುದೇವ್ ಹಾಕಿಕೊಟ್ಟ ಶೈಕ್ಷಣಿಕ ಆಯಾಮಗಳು, ನಿರಂತರ ಯೋಗ, ಧ್ಯಾನ ಸತ್ಸಂಗಗಳು ಹೆಚ್ಚೆಚ್ಚು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಿತ್ತು. ಇದರ ಜೊತೆಗೆ ಶಾಲಾ ಆಡಳಿತ ಮಂಡಳಿಯವರ ಸಹಕಾರ, ಮಾರ್ಗದರ್ಶನ ಶಿಕ್ಷಕಿಯರಿಗೆ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ತರಬೇತಿ ನೀಡಲು ಸಾಧ್ಯವಾಯಿತು. ಶಾಲೆಗೆ ಉತ್ತಮ ಫಲಿತಾಂಶವನ್ನು ತಂದುಕೊಟ್ಟಎಲ್ಲಾ ಮಕ್ಕಳಿಗೆ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್, ಶಿಕ್ಷಕ ವೃಂದ ಶುಭ ಹಾರೈಸಿರುತ್ತಾರೆ.























































































