
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 14/05/2026 ರಿಂದ 17/05/2026 ರವರೆಗೆ ಶ್ರದ್ಧಾ ತರಬೇತಿ ಕಾರ್ಯಾಗಾರವು ನಡೆಯಿತು. ಈ ಕಾರ್ಯಾಗಾರಕ್ಕೆ ಶ್ರೀಮತಿ ನಮಿತಾ ಶಂಕರ್ ಡೋoಗ್ರೆ ಇವರು ತರಬೇತುದಾರರಾಗಿ ಆಗಮಿಸಿ ತರಬೇತಿಯನ್ನು ನೀಡಿದರು.
ಈ ಕಾರ್ಯಾಗಾರದಲ್ಲಿ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಶ್ರೀಯುತ ದಿನೇಶ್ ಕಾಮತ್ ,ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ಹಾಗೂ ಶಿಕ್ಷಕ ವೃಂದದವರು ಉಪಸ್ತಿತರಿದ್ದರು.























