
ಕಾರ್ಕಳ : ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 13/05/2025 ರಂದು ಪರಮಪೂಜ್ಯ ಆಧ್ಯಾತ್ಮಿಕ ನಾಯಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಜನ್ಮದಿನೋತ್ಸವವನ್ನು ಭಕ್ತಿ ಪೂರ್ವಕ ಹಾಗೂ ಉತ್ಸಾಹದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗುರುಪೂಜೆ, ಸುದರ್ಶನ ಕ್ರಿಯೆ ಹಾಗೂ ಸತ್ಸಂಗ ಇತ್ಯಾದಿಗಳು ನಡೆಯಿತು. ಇದರಿಂದ ಆಧ್ಯಾತ್ಮಿಕ ಶಾಂತಿಯುತ ಹಾಗೂ ಉನ್ನತ ವಾತಾವರಣ ನಿರ್ಮಾಣವಾಯಿತು.
ಕಾರ್ಯಕ್ರಮಕ್ಕೆ ಶಾಲಾಕೋಶಾಧಿಕಾರಿಯಾದ ಶ್ರೀಯುತ ದಿನೇಶ್ ಕಾಮತ್ ಮತ್ತು ಶ್ರೀಮತಿ ರವಿಕಲಾ ದಿನೇಶ್ ಕಾಮತ್, ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್. ಕಾಮತ್, ಹಾಗೂ ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ಶ್ರೀಮತಿ ಸುಮಿತ್ರಾ ಇನ್ನಂಜೆ ಭಾಗವಹಿಸಿದರು. ಶಾಲೆಯ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಹೃದಯದಿಂದ ಭಾಗವಹಿಸಿ ಶಾಂತಿ, ಸೌಹಾರ್ದತೆ ಮತ್ತು ಏಕತೆಗೆ ಪ್ರತಿಬಿಂಬವಾಗಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಸುಮಿತ್ರಾ ಇನ್ನಂಜೆಯವರ ಮಾರ್ಗದರ್ಶನದಲ್ಲಿ ಧ್ಯಾನ ಕಾರ್ಯಕ್ರಮವೂ ನಡೆಯಿತು.ಹಾಗೆಯೇ ಈ
ಆಚರಣೆಗೆ ಮತ್ತೊಂದು ಮೆರುಗನ್ನು ನೀಡಿರುವುದು ಅಂದವಾಗಿ ಬಣ್ಣ ಹಚ್ಚಿ ನವೀಕರಣವಾದ ಶಾಲಾ ಸಭಾಂಗಣ ವಿದ್ಯಾರ್ಥಿಗಳಿಗೆ ಹೊಸದಾದ, ಉಜ್ವಲವಾದ ಆರಂಭವನ್ನು ಸೂಚಿಸುವಂತೆ ಹರ್ಷಭರಿತ ವಾತಾವರಣವನ್ನು ಸೃಷ್ಟಿಸಿತು.





















